ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನ​​ ಇಂಟರ್​​ನ್ಯಾಷನಲ್​ ಏರ್​ಲೈನ್ಸ್​ ಚಿಹ್ನೆ ಇರುವ ವಿಮಾನ ಆಕಾರದ ನಿಗೂಢ ಬಲೂನ್ ಪತ್ತೆಯಾಗಿದೆ.

Jammu&Kashmir: ಗಡಿಯಲ್ಲಿ ಪಾಕ್​​ ಏರ್​ಲೈನ್ಸ್​ ಚಿಹ್ನೆ ಇರುವ ವಿಮಾನ ಆಕಾರದ ಬಲೂನ್ ಪತ್ತೆ

ವಿಮಾನ ಆಕಾರದ ನಿಗೂಢ ಬಲೂನ್​ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir) ಗಡಿಯಲ್ಲಿ ಪಾಕಿಸ್ಥಾನ​​ (Pakistan) ಇಂಟರ್​​ನ್ಯಾಷನಲ್​ ಏರ್​ಲೈನ್ಸ್​ ಲೋಗೋ ಇರುವ ವಿಮಾನ ಆಕಾರದ ನಿಗೂಢ ಬಲೂನ್ (Balloon) ಪತ್ತೆಯಾಗಿದೆ. ಕಥುವಾ ಜಿಲ್ಲೆ ಹೀರಾನಗರದ ಬಳಿ ಬಿದ್ದಿರುವ ಕಪ್ಪು-ಬಿಳಿ ಬಣ್ಣದ ನಿಗೂಢ ಬಲೂನ್​​ ಅನ್ನು ಬಿಎಸ್​ಎಫ್ ಯೋಧರು ವಶಪಡಿಸಿಕೊಂಡಿದ್ದಾರೆ. ಬಲೂನ್ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯಾಗಿ 2023ರ ಫೆಬ್ರವರಿಯಲ್ಲಿ ಪಾಕಿಸ್ಥಾನ​​ ಇಂಟರ್​​ನ್ಯಾಷನಲ್​ ಏರ್​ಲೈನ್ಸ್​ ಲೋಗೋ ವಿಮಾನ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದ ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು. ಈ ಮೂಲಕ ಇದೀಗ ಮತ್ತೆ ಎರಡನೇ ಬಾರಿಗೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಮೇ 20 ರಂದು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್​ಅನ್ನು ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ತಿಳಿಸಿದ್ದರು. ಇದರ ಹಿಂದಿನ ದಿನ, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ಬಿಎಸ್​ಎಫ್​​ ಹೊಡೆದುರುಳಿಸಿತ್ತು.

Leave a Reply

Your email address will not be published. Required fields are marked *