2008ರಲ್ಲಿ ನಡೆದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಮೂಲಕ 15 ವರ್ಷಗಳ ನಂತರ ಪತ್ರಕರ್ತೆ ಸೌಮ್ಯ ಕುಟುಂಬದವರಿಗೆ ನ್ಯಾಯ ಲಭಿಸಿದಂತಾಗಿದೆ.
2008 ಸೆಪ್ಟೆಂಬರ್ 30ರಂದು 25 ವರ್ಷದ ಹೆಡ್ ಲೈನ್ಸ್ ಟುಡೇ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಪತ್ರಕರ್ತೆ ಶವ ಕಾರಿನಲ್ಲಿ ಪತ್ತೆಯಾಗಿತ್ತು.
ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇತಿ ಎಂಬುವವರಿಗೆ ಸಾಕೇತ್ ನ್ಯಾಯಾಲಯ ಶಿಕ್ಷೆ ವಿಧಿಸಲಾಗಿದೆ. ನಾಲ್ವರಿಗೆ ಕೊಲೆ ಮಾಡಿದ್ದಕ್ಕಾಗಿ ಹಾಗೂ ಒಬ್ಬನಿಗೆ ಕೊಲೆಗೆ ಸಹಕರಿಸಿದ್ದಕ್ಕಾಗಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ತೀರ್ಪು ಐತಿಹಾಸಿಕವಾದದ್ದು, ತನ್ನ ಮಗಳು ಮೃತಪಟ್ಟಿದ್ದಾಳೆ. ಆಕೆಗೆ ಆದಂತಹ ಅನಾಹುತ ಬೇರೆಯವರಿಗೆ ಆಗದಿರಲಿ ಒಂದು ವೇಳೆ ಈ ರೀತಿ ಶಿಕ್ಷೆ ಆಗದಿದ್ದರೆ ಆರೋಪಿಗಳಿಗೆ ಬೆಂಬಲ ಸೂಚಿಸುವಂತೆ ಆಗುತ್ತಿತ್ತು. ಇದರಿಂದ ಕೊಲೆಗಾರರ ಒಂದು ಗುಂಪನ್ನು ನಿರ್ನಾಮ ಮಾಡಿದಂತಾಗಿದೆ ಎಂದು ಸೌಮ್ಯ ವಿಶ್ವನಾಥನ್ ತಾಯಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸೌಮ್ಯ ವಿಶ್ವನಾಥನ್ ದಕ್ಷಿಣ ದೆಹಲಿಯ ವಸಂತ್ ಕುಂಜ್ ಜಾಗದಲ್ಲಿ ೨೦೦೮ ಸೆಪ್ಟಂಬರ್ ೩೦ರಂದು ಕಾರಿನಲ್ಲಿ ಮೃತಪಟ್ಟ ದೇಹ ದೊರೆತಿತ್ತು. ಮೊದಲಿಗೆ ಇದು ಕಾರು ಅಪಘಾತ ಎಂದು ಗುರುತಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದವರು ಪತ್ತೆ ಮಾಡಿದಾಗ ಅವರನ್ನು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿರುವುದು ಪತ್ತೆಯಾಗಿದೆ.
ಸಿಸಿಟಿವಿ ಫೂಟೇಜ್ನಲ್ಲಿ ಸೌಮ್ಯ ವಿಶ್ವನಾಥನ್ ಕಾರು ನಿಲುಗಡೆ ಮಾಡಿರುವುದು ಪತ್ತೆಯಾಗಿದ್ದು, ರವಿಕುಮಾರ್ ಮತ್ತು ಅಮಿತ್ ಶುಕ್ಲಾ ಎಂಬ ಆರೋಪಿಗಳನ್ನು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.ಕಾಲ್ ಸೆಂಟರ್ ಉದ್ಯೋಗಿಯನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಈ ಇಬ್ಬರನ್ನು ಬಂಧಿಸಲಾಗಿತ್ತು. ಈ ರೀತಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪಿಗಳು ಇದೊಂದು ತ್ರಿಲಿಂಗ್ ಅನುಭವ ಎಂದು ಹೇಳಿಕೊಂಡಿದ್ದಾರೆ.