ಪಂಜಾಬ್‌ : ಪಂಜಾಬಿನ ಭಟಿಂಡಾದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಕಬಡ್ಡಿ ಆಟಗಾರ್ತಿಯರ ಮೇಲೆ ಹಲ್ಲೆ ನಡೆದಿದೆ. ಪಂದ್ಯದ ರೆಫ್ರೆ ನಿರ್ಧಾರದಿಂದ ಈ ಜಗಳ ಆರಭವಾಯಿತು ಎಂದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ತಮಿಳುನಾಡು ಮತ್ತು ದರ್ಭಾಂಗ ವಿಶ್ವವಿದ್ಯಾಲಯದ ಮಧ್ಯೆ ಕಬಡ್ಡಿ ಪಂದ್ಯ ನಡೆಯುತ್ತಿತ್ತು. ಈ ವೇಳೆ ರೆಫ್ರಿ ತೀರ್ಪು ನೀಡಿದ ತೀರ್ಪನ್ನು ತಮಿಳುನಾಡು ಆಟಗಾರ್ತಿಯರು ಪ್ರಶ್ನಿಸಿದ್ದಾರೆ. ಈ ವೀಡಿಯೊದಲ್ಲಿ, ಆಟಗಾರ್ತಿಯರು ಕೆಲವು ಪುರುಷರೊಂದಿಗೆ ಘರ್ಷಣೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ಅಧಿಕಾರಿಗಳೋ ಅಥವಾ ಪ್ರೇಕ್ಷಕರೋ ಎಂಬುದು ವೀಡಿಯೋದಿಂದ ಸ್ಪಷ್ಟವಾಗಿಲ್ಲ. ಈ ವೇಳೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ನಮ್ಮ ರಾಜ್ಯದ ಆಟಗಾರ್ತಿಯರು ಸುರಕ್ಷಿತವಾಗಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಆಟಗಾರ್ತಿಯರಿಗೆ ಯಾವುದೇ ದೊಡ್ಡ ಗಾಯಗಳು, ಏನೂ ಆಗಿಲ್ಲ. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರು ದೆಹಲಿಗೆ ಹಿಂತಿರುಗಿ, ಶೀಘ್ರದಲ್ಲೇ ಅವರು ಚೆನ್ನೈಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *