ರೈಲು ಹಳಿ ಮೇಲೆ ಕಲ್ಲಿನ ಬಂಡೆ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ನಡೆದಿದೆ. ರೈಲು ಬೀದರ್ನಿಂದ ಕಲಬುರಗಿಗೆ ಹೊರಟಿತ್ತು. ಈ ವೇಳೆ ಟನಲ್ ಮೇಲಿನ ಗುಡ್ಡದಿಂದ ರೈಲ್ವೆ ಹಳಿ ಮೇಲೆ ಕಲ್ಲು ಬಿದ್ದಿದೆ. ಇದರಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿಯ ಮರಗುತ್ತಿ ಸುರಂಗ ಮಾರ್ಗದಲ್ಲಿ ರೈಲು ನಿಂತಿದೆ. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿದು ಹಳಿಗಳ ಮೇಲೆ ಕೂತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೇ ಸಿಬ್ಬಂದಿ ಕಲ್ಲಿನ ಬಂಡೆಯನ್ನು ಹಳಿ ಮೇಲಿನಿಂದ ತೆಗೆದಿದ್ದಾರೆ. ಎರಡು ಗಂಟೆ ನಂತರ ರೈಲು ಪ್ರಯಾಣ ಬೆಳಸಿದೆ. Post Views: 45 Post navigation Murder in Bengaluru: ಡಬಲ್ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬಗ್ಗೆ ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ