ರಾಜಸ್ಥಾನದ ಜೋಧ್‌ಪುರ ಎಂಬ ಊರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನು 3 ವರ್ಷದ ಕಂದಮ್ಮನನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಆ ನೀಚ ಕಾಮುಕ ಆ ಹೆಣ್ಣು ಮಗುವನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ಕುರಿತು ಪೊಲೀಸ್ ತನಿಖೆಯು ನಡೆಯುತ್ತಿದೆ.
ಜೋಧ್‌ಪುರ: ರಾಜಸ್ಥಾನದ ಜೋಧ್ಪುರವೆಂಬ ಗ್ರಾಮದಲ್ಲಿ ದೇವಸ್ಥಾನದ ಹೊರಗಿನಲ್ಲಿ ತನ್ನ ಹೆತ್ತವರೊಂದಿಗೆ ಮಲಗಿದ್ದಾಗ 3 ವರ್ಷದ ಹೆಣ್ಣು ಮಗುವನ್ನು ಅಪಹರಿಸಲಾಗಿದ್ದು, ಆ ಕಂದಮ್ಮನನ್ನು ನಿರ್ಜನ ಪ್ರದೇಶಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ವೆಸಗಲಾಗಿದೆ. ಬೆಳಗ್ಗೆ ಜಾವ 6.30ರ ಸುಮಾರಿಗೆ ಸ್ಟಾಲ್ ಹಾಕಲು ಆ ಸ್ಥಳಕ್ಕೆ ಬಂದ ಮಹಿಳೆಯೊಬ್ಬರು ಗಾಬರಿಗೊಂಡಿದ್ದಾರೆ ಆ ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಎಸೆದಿರುವುದನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಆ ಮಗುವಿನ ಮೈಮೇಲೆಲ್ಲ ಗಾಯಗಳು, ತುಟಿಗಳು ಮತ್ತು ಬೆನ್ನಿನ ಮೇಲೆ ಕಚ್ಚಿದ ಅನೇಕ ಗುರುತುಗಳಿದ್ದವು.
ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ಕಡುಬಡವ ಚಿಂದಿ ಆಯುವವನ 3 ವರ್ಷದ ಮಗಳ ಮೇಲೆ ಭಾನುವಾರ ಮುಂಜಾನೆ ಈ ಅತ್ಯಾಚಾರ ನಡೆದಿದೆ. ವಾಸ ಮಾಡಲು ಮನೆಯಿಲ್ಲದ ಕಾರಣದಿಂದಾಗಿ ಆತ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ದೇವಸ್ಥಾನದ ಹೊರದ್ವಾರದಲ್ಲಿ ಮಲಗುತ್ತಿದ್ದ. ಈ ವೇಳೆ ಆತನ ಕೇವಲ 3 ವರ್ಷದ ಮಗುವನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ನಡೆಸಲಾಗಿದೆ.
ಮಾಹಿತಿ ಪಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆ ಕಂದಮ್ಮನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನೂ ಕರೆಸಿ ಪರಿಶೀಲನೆ ನಡೆಸಲಾಗಿದೆ. ನಸುಕಿನ ಜಾವ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬನು ಈ 3 ವರ್ಷದ ಕಂದಮ್ಮನನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಆಧರಿಸಿ, ಆರೋಪಿಯನ್ನು ಕಂಡು ಹಿಡಿಯಲು ಬಲೆ ಬೀಸಿದ್ದಾರೆ.