ಹಿಂದೂ ಕ್ಯಾಲೆಂಡರ್‌ನ ಆಷಾಢ ಮಾಸದ ಮೊದಲ ಶುಕ್ರವಾರದ ಸಂದರ್ಭದಲ್ಲಿ ವಿಶೇಷ ಪೂಜೆ ಮತ್ತು ದೇವಿಯ ದರ್ಶನಕ್ಕಾಗಿ ಕರ್ನಾಟಕದ ಇತರ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ಭಕ್ತರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು.

ಲಕ್ಷ್ಮೀ ಅಲಂಕಾರ’ದಲ್ಲಿ ದೇವಿಯ ದರ್ಶನ ಪಡೆಯಲು ಒಂದರಿಂದ ಮೂರು ಗಂಟೆಗಳ ಕಾಲ ಕಾಯುತ್ತಿದ್ದ ಭಕ್ತರ ಉತ್ಸಾಹಕ್ಕೆ ಉದ್ದನೆಯ ಸರತಿ ಸಾಲುಗಳು ಕಷ್ಟವೇನನಿಸಲಿಲ್ಲ. ದೇವಾಲಯವನ್ನು ಚಿನ್ನದ ಬಣ್ಣದಲ್ಲಿ ಚಿತ್ರಿಸಿ ಜೋಳ, ಕಬ್ಬು ಮತ್ತು ತೆಂಗಿನಕಾಯಿಗಳಿಂದ ಅಲಂಕರಿಸಲಾಗಿತ್ತು; ನೇರಳೆ ಮತ್ತು ಗುಲಾಬಿ, ಹಳದಿ ಬಣ್ಣದ ಹೂಗಳು ಮತ್ತು ಗುಲಾಬಿ ಮೊಗ್ಗುಗಳಿಂದಲು ಅಲಂಕೃತಗೊಂಡಿದ್ದ ದೇವಾಲಯ ನಿಜಕ್ಕೂ ಸೊಗಸಾಗಿ ಕಂಗೊಳಿಸುತ್ತಿತ್ತು.

ದೇವಿಯ ಮುಕ್ತ ದರ್ಶನಕ್ಕಾಗಿ 1,200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಡಿಸಿ ಡಾ.ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭದ್ರತೆಯ ಮೇಲುಸ್ತುವಾರಿ ವಹಿಸಿದ್ದಾರೆ, ಇದಲ್ಲದೆ ದೇವಸ್ಥಾನದ ಪ್ರಧಾನ ಅರ್ಚಕರಾದ ಎನ್.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಮುಂಜಾನೆ 3:30ರಿಂದಲೇ ದೇವಿಗೆ ಮಹಾನ್ಯಾಸಕ ಪೂರ್ವಕ ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕದಂತಹ ವಿಶೇಷ ಪೂಜೆಗಳನ್ನು ನೆರವೇರಿಸಿದ್ದೇವೆ ಎಂದು ತಿಳಿಸಿದರು.

ಬೆಳಗಿನ ಜಾವ 3 ಗಂಟೆಯಿಂದ ಭಕ್ತರಿಗೆ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದ್ದು, ಬೆಳಗಿನ ಜಾವ 5.30ರಿಂದ ಮೂರು ಸರತಿ ಸಾಲಿನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ಒಂದು ಸರತಿ ಉಚಿತ ದರ್ಶನಕ್ಕೆ, ಇನ್ನೆರಡು 300 ಮತ್ತು 50 ರೂಪಾಯಿ ಟಿಕೆಟ್ ಹೊಂದಿರುವವರಿಗೆ ಇತ್ತು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 50 ರೂಪಾಯಿ ಟಿಕೆಟ್‌ದಾರರ ಸರತಿ ಸಾಲಿನಲ್ಲಿ ಉಚಿತವಾಗಿ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಇಂದು ರಾತ್ರಿ 9:30 ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ನಗರದ ಬಸ್ ನಿಲ್ದಾಣದಿಂದ 25 ಎಸಿ ಮತ್ತು 55 ಸಾಮಾನ್ಯ ಬಸ್‌ಗಳು ಸೇರಿದಂತೆ 80 ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಳಿಗ್ಗೆ 5 ರಿಂದ ರಾತ್ರಿ 10 ರ ನಡುವೆ ಬೆಟ್ಟದ ತುದಿಗೆ ಹೋಗಲು ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ.

ವಿಐಪಿಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳ ಪ್ರವೇಶವನ್ನು ಪೊಲೀಸರು ನಿಷೇಧಿಸಿದ್ದರಿಂದ ಲಲಿತ ಮಹಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪಾರ್ಕಿಂಗ್ ಸೌಲಭ್ಯದಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ.

ಶ್ರೀ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಮಲ್ಟಿ ಲೆವೆಲ್ ಪಾರ್ಕಿಂಗ್ ಏರಿಯಾದಲ್ಲಿ 18ನೇ ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಭಕ್ತರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿತ್ತು. ಭಕ್ತರು ಬೆಳಗಿನ ಉಪಾಹಾರವಾಗಿ ಪೊಂಗಲ್, ರವೆ ವಾಂಗಿಬಾತ್, ಅನಾನಸ್ ಕೇಸರಿ ಬಾತ್ ಮತ್ತು ಮಧ್ಯಾಹ್ನದ ಊಟಕ್ಕೆ ಬಾಳೆ ಎಲೆಯಲ್ಲಿ ಬಿಸಿ ಬೇಳೆಬಾತ್, ಅನ್ನ, ಸಾಂಬಾರ್, ಮೊಸರು, ಮಾವಿನ ಬರ್ಫಿ, ಕೋಸಂಬರಿ, ಸಂಡಿಗೆ ಮತ್ತು ಉಪ್ಪಿನಕಾಯಿಯನ್ನು ಸವಿದರು.

ಶಶಿಶೇಖರ್ ದೀಕ್ಷಿತ್ ಅವರ ಪ್ರಕಾರ, ಆಷಾಢ ಮಾಸದಲ್ಲಿ ‘ಶಕ್ತಿ ದೇವತೆ’ಯನ್ನು ಪೂಜಿಸುವುದು ಮಂಗಳಕರವಾಗಿದೆ, ಏಕೆಂದರೆ ಈ ಮಾಸದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪೂಜಿಸುವುದರಿಂದ ಇಡೀ ವರ್ಷ ದೇವಿಯನ್ನು ಪೂಜಿಸಿದವರಿಗೆ ಸಮಾನವಾದ ಪುಣ್ಯವನ್ನು ಪಡೆಯಬಹುದು ಎಂದು ನಂಬಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸರತಿ ಸಾಲುಗಳಲ್ಲಿ ಹಾಗೂ ಲಕ್ಷಾಂತರವಾಗಿ ಸೇರುತ್ತಾರೆ.

Leave a Reply

Your email address will not be published. Required fields are marked *