ಮಂಗಳವಾರ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಟೋಲ್ ಪ್ಲಾಜಾ ಬಳಿ ಚಿರತೆಯೊಂದು ಫ್ಲೈಓವರ್ ದಾಟುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಟೆಕ್ ಹಬ್ ಆಗಿರುವ ಪ್ರದೇಶದಲ್ಲಿ ಹೆಚ್ಚಿನ ಜಾಗರೂಕತೆಗೆ ಕಾರಣವಾಗಿದೆ.
ವರದಿಯ ಪ್ರಕಾರ, ಚಿರತೆಯ ಚಲನವಲನವು ಹಂತ 1 ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೊಡ್ಡ ಚಿರತೆಯು ಪನಕ್ ಇಂಡಿಯಾ ಕಂಪನಿ ಕಡೆಯಿಂದ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನ (ಎನ್‌ಟಿಟಿಎಫ್) ಮೈದಾನಕ್ಕೆ ಚಲಿಸುತ್ತಿರುವುದನ್ನು ಗಮನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಎನ್‌ಟಿಟಿಎಫ್‌ನ ಪ್ರಾಂಶುಪಾಲರಾದ ಸುನಿಲ್ ಜೋಶಿ, ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕೆ ತಪಾಸಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರೂ ಚಿರತೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸಾರ್ವಜನಿಕರಿಗೆ ಜಾಗರೂಕರಾಗಿರಿ ಮತ್ತು ಇನ್ನು ಮುಂದೆ ಚಿರತೆ ಕಂಡುಬಂದಲ್ಲಿ ತಕ್ಷಣವೇ ತಿಳಿಸಿ ಎಂದು ಎಚ್ಚರಿಸಿದ್ದಾರೆ.