ರಾಜ್ಯದಲ್ಲಿಯೇ ಅತ್ತುತ್ತಮವಾಗಿ ನಡೆಯುತ್ತಿರುವ ಪ್ರತಿಷ್ಟಿತ ಭೂ ಅಭಿವೃದ್ದಿ ಬ್ಯಾಂಕ್ ಗಲ ಪೈಕಿ ಚಿಕ್ಕಬಳ್ಳಾಪುರ ಪಿ ಎಲ್ ಡಿ ಬ್ಯಾಂಕ್ ಮುಂದಿನ ಅವದಿಗೆ ನೂತನ ಅಧ್ಯಕ್ಷರಾಗಿ ಗಂಗರೆಕಾಲುವೆ ಪ್ರಸಾದ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ ನೂತನ ಅಧ್ಯಕ್ಷರನ್ನ ಅಭಿನಂದಿಸಿದ ಸಂಸದ ಡಾ ಕೆ.ಸುಧಾಕರ್ ಭ್ರಷ್ಟಾಚಾರ ರಹಿತವಾಗಿ ಕಾರ್ಯಬಾರ ನಡೆಸುತ್ತಿರುವ ಚಿಕ್ಕಬಳ್ಳಾಪುರ ಪಿ ಎಲ್ ಡಿ ಬ್ಯಾಂಕ್ ಗೆ ಪ್ರಸಾದ್ ಇನ್ನಷ್ಟು ಸೇವೆ ಸಲ್ಲಿಸಿ ಉತ್ತಮ ಹೆಸರುಗಳಿಸಲಿ ಎಂದು ಸಲಹೆ ನೀಡಿದರು
ಚಿಕ್ಕಬಳ್ಳಾಪುರ ಪಿ ಎಲ್ ಡಿ ಬ್ಯಾಂಕ್ ಗೆ ಮುಂದಿನ ಅವದಿಗೆ ನೂತನ ಅಧ್ಯಕ್ಷರಾಗಿ ಗಂಗರೆಕಾಲುವೆ ಪ್ರಸಾದ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಒಂದೂ ಮುಕ್ಕಾಲು ವರ್ಷ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಇಂದು ನಡೆದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಪ್ರಸಾದ್ ಒಬ್ಬರೆ ಅರ್ಜಿ ಸಲ್ಲಿಸಿದ್ದರಿಂದ ಅವರನ್ನೆ ಅವಿರೋದ ಆಯ್ಕೆ ಮಾಡಿದ್ದಾರೆ.
ಸಂಸದ ಡಾ ಕೆ.ಸುಧಾಕರ್ ಸಹ ಪಿ ಎಲ್ ಡಿ ಬ್ಯಾಂಕ್ ಗೆ ಬೇಟಿ ನೀಡಿ ನೂತನವಾಗಿ ಆಯ್ಕೆಯಾದ ಪ್ರಸಾದ್ರವರಿಗೆ ಅಭಿನಂದನೆ ಸಲ್ಲಿಸಿದರು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಪಿ ಎಲ್ ಡಿ ಬ್ಯಾಂಕ್ ಅಧರದೆ ಆದ ಬೆಲೆ ಇದೆ ಹಿಂದೆ ಅಧ್ಯಕ್ಷರಾಗುದ್ದ ನಾಗೇಶ್ ಅವರ ನಿರಂತರ ಪ್ರಯತ್ನದಿಂದಾಗಿ ಭವ್ಯವಾದ ನೂತನ ಕಟ್ಟಡ ಎದ್ದು ನಿಂತಿದೆ ವರ್ಷಕ್ಕೆ ಮೂವತೈದರಿಂದ ನಲವತ್ತು ಲಕ್ಷ ಆದಾಯ ತಂದುಕೊಡುತ್ತಿದೆ ಅವರ ನಂತರ ಬಂದ ಕಾಳೆಗೌಡರು ಉತ್ತಮ ಕೆಲಸ ಮಾಡಿದ್ದಾರೆ ಪ್ರಸಾದ್ ಸಹ ಅವರಿಗೆ ಸಿಕ್ಕಿರುವ ಅವದಿಯಲ್ಲಿ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಕೋರಿದರು
ಇನ್ನು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಪ್ರಸಾದ್ ನನಗೆ ಸಿಕ್ಕಿರುವ ಅವದಿಯಲ್ಲಿ ಉತ್ತಮೆ ಸೇವೆ ಸಲ್ಲಿಸುತ್ತೇನೆ ಕೃಷಿ ಆಧಾರಿತ ಸಾಲ ಸೌಲಬ್ಯಗಳು ನೀಡಲಾಗುವುದು ನಮ್ಮಲ್ಲಿ ಕೃಷಿ ಬೆಳೆಗಳಾದ ದ್ರಾಕ್ಷಿ,ಕುರಿ ಸಾಕಾಣಿಗೆ ಕೃಷಿ ಉಪಕರಣಗಳ ಖರೀದಿಗಾಗಿ ಸಾಲ ನೀಡಲಾಗುವುದು ಎಂದ ಅವರು ನನ್ನ ಆಯ್ಜೆಗೆ ಸಹಕರಿಸಿದ ಡಾ ಕೆ.ಸುಧಾಕರ್,ಪಿ ಎಲ್ ಡಿ ಬ್ಯಾಂಕ್ ನ ಸದಸ್ಯರು,ನನ್ನ ಹಿತೈಷಿಗಳು,ಸ್ನೇಹಿತರು ಅಧುಕಾರಿಗಳಿಗು ಶುಭಾಷಯ ಕೋರಿದರು