ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದಲ್ಲಿ ಒಂದೇ ಗ್ರಾಮದ ಬೇರೆ ಬೇರೆ ಧರ್ಮದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ತಮ್ಮ ಜೀವಿತ ರಕ್ಷಣೆಗಾಗಿ ಈ ಜೋಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಪ್ರತ್ಯೇಕವಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಮೈಲಪನಹಳ್ಳಿ ಗ್ರಾಮದ ನಾಗಾರ್ಜುನ ಮತ್ತು ಫಸಿಯಾ ಎಂಬುವವರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮನೆವಿಟ್ಟು ಹೊರಹೋಗಿ ಈ ಜೋಡಿ ಮದುವೆಯಾಗಲು ನಿರ್ಧರಿಸಿತು. ಆಕೆಯ ಪೋಷಕರು ಮತ್ತು ಕುಟುಂಬಸ್ಥರು ಅವರ ಮದುವೆಗೆ ಅಡ್ಡಿಪಡಿಸಿದ್ದರು.
ಹೀಗಾಗಿ, ಹೊಸ ದಂಪತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಜೀವನದ ರಕ್ಷಣೆಗಾಗಿ ಹೋರಾಟ ಮಾಡಿದರು. ಪೊಲೀಸರು ಇತರ ಸಂಬಂಧಿಕರನ್ನು ವಿಚಾರಣೆಗಾಗಿ ಕರೆಯುತ್ತಾ, ಫಸಿಯಾ, “ನಾನು ನಾಗಾರ್ಜುನನನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ, ಮತ್ತು ಅವನ ಜೊತೆಗೆ ನನ್ನ ಜೀವನ ಸಾಗಿಸಲು ನಾನು ತೀರ್ಮಾನಿಸಿದ್ದೇನೆ” ಎಂದು ಹೇಳಿಕೆ ನೀಡಿದ ನಂತರ, ಅವರನ್ನು ರಕ್ಷಣೆ ನೀಡುವಂತೆ ನಿರ್ಧರಿಸಿದರು. ಈ ಸಂದರ್ಭದಲ್ಲಿ, ಪೊಲೀಸ್ ಸ್ಟೇಷನ್ ಎದುರಿನಲ್ಲಿದ್ದ ಅನೇಕ ಜನರಿಗೆ ಖಾಕಿಪಡೆ ಎಚ್ಚರಿಕೆ ನೀಡಿ, ಅವರನ್ನು ವಾಪಸ್ ಕಳುಹಿಸಿಕೊಟ್ಟಿದ್ದಾರೆ.