ನನ್ನ ಜೀವನದ ಪುಸ್ತಕದಲ್ಲಿ ಒಂದು ಪುಟವಾಗಿ ಬಂದಿರುವೆ…. ಪುಸ್ತಕವು ತೆಗೆದರೆ ನಿನ್ನ ಪುಟವನ್ನು ಮತ್ತೇ ಮತ್ತೇ ನೋಡಬೇಕೆಂದು ಅನಿಸುತ್ತದೆ… ನನ್ನ ಪ್ರತಿಯೊಂದು ಹೆಜ್ಜೆಗೂ ನೀ ನನ್ನ ಧ್ವನಿಯಾಗಿರುವೆ… ನನ್ನ ಸುಖ ದುಃಖಗಳಲ್ಲಿ ಭಾಗಿಯಾಗಿರುವೆ… ಒಮ್ಮೊಮ್ಮೆ ಕೋಪಿಸುವೆ, ಒಮ್ಮೊಮ್ಮೆಶಪಿಸುವೆ, ಒಮ್ಮೊಮ್ಮೆಪ್ರೀತಿಸುವೆ… ಈ ಜೀವನದ ಪಯಣದಲ್ಲಿ ಬಾಳ ಸಂಗಾತಿಯಾಗಿ ಬಂದಿರುವ ನಿನಗೆ ನನ್ನಯ ಹೃದಯಪೂರ್ವಕ ಧನ್ಯವಾದಗಳು… ನನ್ನಿಂದ ನಿನಗೆ ನೋವಾಗಿದ್ದರೆ ಕ್ಷಮಿಸಿಬಿಡು ನಿನ್ನ ಮನದಲ್ಲಿ ಓ ನನ್ನ ನಲ್ಲೆ!

Leave a Reply

Your email address will not be published. Required fields are marked *