ಪೋಷಕರು ಪ್ರೀತಿ ನಿರಾಕರಿಸಿದ ಹಿನ್ನಲೇ ಅಂಗವಿಕಲ ಯುವತಿಯನ್ನು ಮನೆಯಿಂದ ಕರೆದುಕೊಂಡು ಬಂದು ನಗರದ ಮರುಳು ಸಿದ್ದೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಅಂತರ್ಜಾತಿ ವಿವಾಹ ಮಾಡಿಕೊಂಡ ಘಟನೆ ಇಂದು ನಡೆದಿದೆ.
ತಾಲೂಕಿನ ಪೇರೇಸಂದ್ರ ಬಳಿಯ ಕೋರೇನಹಳ್ಳಿ ಮೂಲದ ಗೋಪಿ ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದ ಪವಿತ್ರ ಸುಮಾರು 6 ತಿಂಗಳಿಂದ ಪ್ರೀತಿ ಮಾಡಿಕೊಂಡಿದ್ದು ಅದರಂತೆ ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪೋಷಕರ ಒಪ್ಪದ ಹಿನ್ನಲೇ ಇಂದು ನಗರದ ಮರುಳು ಸಿದ್ದೇಶ್ವರ ದೇವಸ್ಥಾನದಲ್ಲಿ ಪರಸ್ಪರ ಇಬ್ಬರ ಒಪ್ಪಿಗೆ ಮೇರೆಗೆ ಸೆ.13 ಸಂಜೆ 6 ಗಂಟೆ ಸಮಯದಲ್ಲಿ ಸಪ್ತಪದಿ ತುಳಿದಿದ್ದಾರೆ.
ಪವಿತ್ರ ಕಳೆದ ಆರು ತಿಂಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ರು ಇದೇ ವೇಳೆ ಕೋರೇನಹಳ್ಳಿಯ ಯುವಕ ಗೋಪಿ ಪರಿಚಯವಾಗಿ ಪರಸ್ಪರ ಪ್ರೀತಿ ಮಾಡಿಕೊಂಡಿದ್ದಾರೆ. ಇದೇ ವಿಚಾರ ಪೋಷಕರ ಗಮನಕ್ಕೆ ಬಂದಿದ್ದು ಇಬ್ಬರ ಪ್ರೀತಿಗೆ ಯುವಕನ ಪೋಷಕರು ನಿರಾಕರಿಸಿದ್ದಾರೆ. ತದ ನಂತರ ಇಬ್ಬರು ಮಂಚೇನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ರಾಜೀ ಪಂಚಾಯತಿ ಮಾಡಿ ಯುವತಿಯ ಇಷ್ಟದಂತೆ ಯುವಕನ ಜೊತೆ ಕಳುಹಿಸಿಕೊಟ್ಟಿದ್ದಾರೆ.
ತದನಂತರ ಸಮತ ಸೈನಿಕ ದಳದ ರಾಜ್ಯ ಮಹಾಪ್ರಾಧಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಗಮನಕ್ಕೆ ತಂದು ಯುವಕ ಯುವತಿಯ ಒಪ್ಪಿಗೆ ಮೇರೆಗೆ ನಗರದ ಮರಳು ಸಿದ್ದೇಶ್ವರ ದೇವಸ್ಥಾನದಲ್ಲಿ ಯುವತಿಯ ಪೋಷಕರ ನೇತೃತ್ವದಲ್ಲಿ ಇಬ್ಬರ ವಿವಾಹ ನೆರವೇರಿಸಿದ್ದಾರೆ. ಇನ್ನೂ ಇಬ್ಬರ ಇಷ್ಟದಂತೆ ನಾವು ಮದುವೆಯಾಗಿದ್ದೇವೆ ಎಂದು ನೂತನ ವಧುವರರು ತಿಳಿಸಿದ್ದಾರೆ.
15 ದಿನಗಳ ಹಿಂದೆ ಇಬ್ಬರ ಪ್ರೀತಿ ವಿಚಾರ ಗೋತ್ತಾಗಿತ್ತು. ಆದರೆ ಇಬ್ಬರ ಮದುವೆಗೆ ಯುವಕನ ಪೋಷಕರು ಒಪ್ಪಿಗೆ ನಿರಾಕರಿಸುವ ಮಾಹಿತಿ ತಿಳಿದು ಬರುತ್ತಿದಂತೆ ಯುವಕ ಯುವತಿಯನ್ನು ಕರೆದುಕೊಂಡು ಬಂದು ನಮ್ಮ ಗಮನಕ್ಕೆ ತಂದಿದ್ದಾರೆ. ಅದರಂತೆ ಇಂದು ಯುವಕ ಅಂಗವಿಕಲ ಯುವತಿಯನ್ನು ನಮ್ಮ ನೇತೃತ್ವದಲ್ಲಿ ಮದುವೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ ಎಂದು ಸಮತ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಸಿ ವೆಂಕಟರಮಣಪ್ಪ ಮಾಹಿತಿ ನೀಡಿ ನೂತನ ವಧುವರರಿಗೆ ಆಶೀರ್ವಾದ ನೀಡಿದ್ದಾರೆ.
ಬೈಟ್: ವೆಂಕಟರಮಣಪ್ಪ