ರಾಯಚೂರು : ಮಹಾ ಶಿವರಾತ್ರಿ ಪ್ರಯುಕ್ತ ರಾಯಚೂರಿನಲ್ಲಿ ಮಧ್ಯರಾತ್ರಿಯಿಂದಲೇ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಧ್ಯರಾತ್ರಿಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ.

ಶಿವ ಮಾಲಾಧಾರಿಗಳು ನಿರಂತರ ಶಿವನಾಮಸ್ಮರಣೆ, ಶಿವನ ಭಜನೆ ಮಾಡುತ್ತಿದ್ದಾರೆ. ನಿರಂತರ ಮಹಾರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಗವಂತನ ದರ್ಶನಕ್ಕಾಗಿ ಪರದಾಟ ನಡೆಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಭಕ್ತರು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ.

ನಗರದ ನಂದೀಶ್ವರ, ರಾಮಲಿಂಗೇಶ್ವರ, ಕೊದಂಡರಾಮ ದೇವಾಲಯದಲ್ಲೂ ವಿಶೇಷಗಳನ್ನ ನೆರವೇರಿಸಲಾಗುತ್ತಿದೆ. ಮಹಾಮಂಗಳಾರತಿ, ಸಂಜೆ ಭಜನೆ, ರಾತ್ರಿ ಪೂರಾ ಜಾಗರಣೆ ಕಾರ್ಯಕ್ರಮಗಳನ್ನ ಎಲ್ಲಾ ಶಿವ ದೇವಾಲಯಗಳಲ್ಲಿ ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *