Mahesh Babu New Photoshoot: ಟಾಲಿವುಡ್ನಲ್ಲಿ ಮಹೇಶ್ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ನಟ ಮಹೇಶ್ ಬಾಬು ಅವರು ಸದಾ ಟ್ರೆಂಡ್ನಲ್ಲಿ ಇರುತ್ತಾರೆ. ಅವರಿಗೆ ಫ್ಯಾಷನ್ ಬಗ್ಗೆ ಉತ್ತಮ ಅಭಿರುಚಿ ಇದೆ. ಈಗ ಮಹೇಶ್ ಬಾಬು ಹೊಸ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.1 / 5 ಟಾಲಿವುಡ್ನಲ್ಲಿ ಮಹೇಶ್ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಮಹೇಶ್ ಬಾಬು ಹವಾ ಸೃಷ್ಟಿ ಮಾಡಿದ್ದಾರೆ.2 / 5 ಇತ್ತೀಚೆಗೆಷ್ಟೇ ಮಹೇಶ್ ಬಾಬು ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಯಿತು. ಆ ಚಿತ್ರಕ್ಕೆ ‘ಗುಂಟೂರು ಖಾರಂ’ ಎಂದು ಹೆಸರು ಇಡಲಾಗಿದೆ. ಇದರ ಬೆನ್ನಲ್ಲೇ ಅವರ ಹೊಸ ಫೋಟೋಗಳು ವೈರಲ್ ಆಗಿವೆ.3 / 5 ಈ ಫೋಟೋಶೂಟ್ನಲ್ಲಿ ಮಹೇಶ್ ಬಾಬು ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಕ್ಕಾ ಹಾಲಿವುಡ್ ಹೀರೋ ರೀತಿ ಮಹೇಶ್ ಬಾಬು ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.4 / 5 ಸಿನಿಮಾ ಕೆಲಸಗಳಲ್ಲಿ ಮಹೇಶ್ ಬಾಬು ಅವರು ಗಡಿಬಿಡಿ ಮಾಡುವುದಿಲ್ಲ. ಸಿನಿಮಾಗಳ ಜೊತೆಯಲ್ಲಿ ಅವರು ಫ್ಯಾಮಿಲಿಗೂ ಹೆಚ್ಚು ಸಮಯ ನೀಡುತ್ತಾರೆ. ಆದಷ್ಟು ಬೇಗ ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.5 / 5 Post Views: 53 Post navigation Shakti Scheme: ‘ಶಕ್ತಿ’ ಯೋಜನೆ ಉದ್ಘಾಟನೆಗೆ ನಿರ್ಮಲಾ ಸೀತಾರಾಮನ್ಗೆ ಆಹ್ವಾನ, ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರಿಗೆ ಫ್ರೀ ಬಸ್ Sudipto Sen: ಸಾವರ್ಕರ್ ಜೀವನಾಧಾರಿತ ಸಿನಿಮಾದ ನಿರ್ಮಾಪಕರ ಜೊತೆ ‘ದಿ ಕೇರಳ ಸ್ಟೋರಿ’ ನಿರ್ದೇಶಕರ ಹೊಸ ಪ್ರಾಜೆಕ್ಟ್