ಅಪೌಷ್ಟಿಕತೆ ನಿವಾರಣೆ ಮಾಡಬೇಕು ಎಂದು ರಾಜ್ಯ ಸರಕಾರ ಮೊಟ್ಟೆ ಸರಬರಾಜಿಗೆ ಕೋಟಿಗಟ್ಟಲೆ ಅನುದಾನ ನೀಡುತ್ತೆ.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಮನ್ಸೂರ್ ಅಹ್ಮದ್ ಅವರ ಕುತಂತ್ರದಿಂದ ತಿಂಗಳಿಗೊಮ್ಮೆ ಅನಾಮಧೇಯ ವ್ಯಕ್ತಿಯೊಬ್ಬ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಮಾನ್ವಿ ತಾಲೂಕಿನಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಮೊಟ್ಟೆಗಳನ್ನು ಖರೀದಿ ಮಾಡಬೇಕು ಎಂದು ಸರಕಾರವೇ ಅಂಗನವಾಡಿ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದೆ.ಆದರೆ ಮಾನ್ವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಮನ್ಸೂರ್ ಅಹ್ಮದ್ ಸಾಹೇಬ್ರು ಅನಾಮಧೇಯ ವ್ಯಕ್ತಿಯಿಂದ ಮೊಟ್ಟೆ ಸರಬರಾಜು ಮಾಡಿ ಲೂಟಿ ಮಾಡುವ ತಂತ್ರದ ದಂಧೆ ಇದು.
ಅನಾಮಧೇಯ ವ್ಯಕ್ತಿ ಮೊಟ್ಟೆ ಸರಬರಾಜು ಮಾಡಿದ ನಂತರ ಅಂಗನವಾಡಿ ಕಾರ್ಯಕರ್ತೆಯರಿಂದ ಚೆಕ್ ಪಡೆದುಕೊಂಡು ಸುಖೋ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿಕೊಂಡು ಸಿಡಿಪಿಒ ಮನ್ಸೂರ್ ಅಹ್ಮದ್ ಮೊಟ್ಟೆ ಸರಬರಾಜು ನೆಪದಲ್ಲಿ ಲೂಟಿ ಮಾಡುತ್ತಿದ್ದಾರೆಂದು ಸಂಘಟನಾಕಾರರು ಆರೋಪಿಸಿದ್ದಾರೆ.