ಬೆಂಗಳೂರು : ಪರಿಶಿಷ್ಟರ ಹಣ ದುರ್ಬಳಕೆಯಾಗುತ್ತಿರುವ ಹಿನ್ನೆಲೆ ಇಂದು ಡಾ.ಸಿ.ಎಸ್.ರಘು DSS ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. SC/ST ಹಣ ದುರ್ಬಳಕೆಯಾಗುತ್ತಿರುವ ಹಿನ್ನೆಲೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಪ್ರೊಟೆಸ್ಟ್ ಮಾಡಿದ್ದಾರೆ.
ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವ ಆರೋಪ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಗೆ ದಲಿತರು ಆಗಮಿಸಿದರು. SC-ST ಸಮುದಾಯಕ್ಕೆ ಸರ್ಕಾರದಿಂದ ವಂಚನೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ಬಜೆಟ್ ಮಂಡನೆಯಲ್ಲಿ ಸರ್ಕಾರ ಯಾರ ಪರ ನಿಲ್ಲುತ್ತೆ? ಕಾಂಗ್ರೆಸ್ ಸರ್ಕಾರಕ್ಕೆ ಮತ ಹಾಕಿದ್ದೇ ಜನಸಾಮಾನ್ಯರು,
ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದಲಿತರಿಗೆ ನ್ಯಾಯ ವಿಲ್ಲದಂತಾಗಿದೆ. SCSP-TSP ಹಣವನ್ನ ಸರ್ಕಾರ ಗ್ಯಾರಂಟಿಗಳಿಗೆ ಬಳಸುವುದು, ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ DSS ರಾಜ್ಯಾಧ್ಯಕ್ಷ ಡಾ.C.S ರಘು ಎಚ್ಚರಿಕೆ ನೀಡಿದ್ದಾರೆ.
ನಂತರ ಮಾತನಾಡಿದ ದಲಿತ ಹೋರಾಟಗಾರ ಬೋಜೇಗೌಡ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ನಾವು ಖಂಡಿಸುತ್ತೇವೆ. SC/ST ಪಂಗಡಗಳ ಹಣ ದೋಚುತ್ತಿದೆ. ರಾಜ್ಯ ಸರ್ಕಾರ
ಅಭಿವೃದ್ಧಿಗೆ ಇರುವ ಹಣವನ್ನು ದುರುಪಯೋಗ ಮಾಡುತ್ತಿದೆ. ಇದೇ ರೀತಿ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ದಲಿತ ಹೋರಾಟಗಾರ ಮೂರ್ತಿ ಅವರು, ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ದಲಿತರ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಸರ್ಕಾರ ಬಳಸುತ್ತಿದೆ. ಸಿದ್ದರಾಮಯ್ಯಗೆ KSRTC ಚಾಲಕರಿಗೆ ಸಂಬಳ ಕೊಡೋ ಯೋಗ್ಯತೆ ಇಲ್ಲ. ಯುವಕರಿಗೆ ಕೆಲಸ ಕೊಡಿ, ರೈತರಿಗೆ ಭೂಮಿ ಕೊಡಿ ಎಂದರು. ದಲಿತರಿಗೆ ಸಮಸ್ಯೆ ಬಂದಾಗ ನಾವೆಲ್ಲರು ಒಂದಾಗೋದು ಪಕ್ಕಾ ಎಂದು ಹೇಳಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು ಎಂದು ಹೇಳಲಾಗಿದೆ.