ವಿಜಯಪುರ : ಕರ್ನಾಟಕ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಟಿಕೆಟ್ ದರ 15% ಏರಿಕೆ ವಿಚಾರವಾಗಿ, ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು ಗಂಡಸರಿಗೆ ಹೆಚ್ಚಿನ ದುಡ್ಡು ಹಾಕಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ? ಇದು ಹೆಣ್ಣು ಮಕ್ಕಳಿಗೂ ಅನ್ಯಾಯವಾಗುತ್ತದೆ. ಮಕ್ಕಳು ಮನೆಯ ಯಜಮಾನರಿಗೂ ಅನ್ಯಾಯವಾಗುತ್ತದೆ. ಇವರ ರಕ್ಷಣೆ ಮಾಡಬೇಕೆಂದರೆ ಹೆಣ್ಣು ಮಕ್ಕಳೂ ಸಹ ಕಾಂಗ್ರೆಸ್‌ಗೆ ಮತ ಹಾಕಬಾರದೆಂದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಪ್ರತಿಭಟನೆಯಲ್ಲಿ ವಿಜಯೇಂದ್ರ ಭಾಗಿ ಆಗದ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ಎಲ್ಲೆಡೆ ಪ್ರತಿಭಟನೆ ಎಂದು ಹೇಳಿಕೊಂಡಿದ್ದರು. ಪಾಪಾ ವಿಜಯೇಂದ್ರ ಅವರಿಗೆ ಏನು ಕೆಲಸ ಇತ್ತು ಗೊತ್ತಿಲ್ಲ. ನಿನ್ನೆ ಮೂರು ಕಡೆ ಹೋರಾಟ ಆಗಿದೆ. ಒಂದು ವಕ್ಫ್ ವಿರುದ್ಧ, ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ, ಇನ್ನೊಂದು ಬಾಣಂತಿಯರ ಸಾವು ಹೋರಾಟ. ಆ ಪೈಕಿ ವಿಜಯೇಂದ್ರ ಅವರು ಬಾಣಂತಿಯರ ಸಾವಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಅವರು ಅಲ್ಲಿ ಮಾಡಿದ್ದಾರೆ, ನಾವು ಇಲ್ಲಿ ಮಾಡಿದ್ದೇವೆ ಅಷ್ಟೇ ಎಂದು ಕಾಲೆಳದರು.

ಆರ್.ಅಶೋಕ್ ಹಾಗೂ ವಿಜಯೇಂದ್ರ ಮಧ್ಯೆ ಹೊಂದಾಣಿಕೆ ಕೊರತೆ ವಿಚಾರವಾಗಿ, ಹಾಗೇನಿಲ್ಲ, ಆರ್.ಅಶೋಕ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತಾರೆ. ಬೆಳಗಾವಿ ಅಅಧಿವೇಶನದ ವೇಳೆ ನಮ್ಮ ಹಿರಿಯರ ಸಲಹೆ ಪಡೆದು ಚರ್ಚೆ ಮಾಡಿದ್ದಾರೆ. ಎಲ್ಲರಗೂ ಅವಕಾಶ ಕೊಟ್ಟಿದ್ದಾರೆ. ಅವರ ಬಗ್ಗೆ ನಮ್ಮದೇನು ಆರೋಪಗಳಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ವಿಚಾರವಾಗಿ, ಚುನಾವಣೆ ಪ್ರಕ್ರಿಯೆ ಇದ್ದೇ ಇರುತ್ತದೆ. ಪ್ರಹ್ಲಾದ್ ಜೋಶಿ ಅವರು ಹೇಳಿದ್ದು ಸರಿಯಿದೆ. ಅವರು ಹೇಳಿದ್ರಲ್ಲಿ ತಪ್ಪೇನಿಲ್ಲ. ಇನ್ನು ಮುಂದೆ ಬರೋದು ರೆಗ್ಯುಲರ್ ಚುನಾಯಿತ ಅಧ್ಯಕ್ಷರು. ಅದು ಯಾರು ಆಗುತ್ತಾರೆ? ಯಾರು ಆಗಬೇಕು? ಎಂದು ರಾಜ್ಯ ಘಟಕ ಕೇಂದ್ರ ಹೈಕಮಾಂಡ್‌ಗೆ ಅಧಿಕಾರಿ ಕೊಟ್ಟಿದೆ. ಕೇಂದ್ರದ ಹೈಕಮಾಂಡ್ ಯಾರಿಗೆ ಅಧ್ಯಕ್ಷರನ್ನ ಮಾಡಬೇಕು ಎಂದು ಇಚ್ಛಿಸುತ್ತದೆ ಅವರನ್ನು ಮಾಡ್ತಾರೆ. ಚುನಾವಣೆ ಆಗೋದಿಲ್ಲ, ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಮಾಡುತ್ತಾರೆ ಎಂದರು.

Leave a Reply

Your email address will not be published. Required fields are marked *