ಬೆಂಗಳೂರು: ಕೊಂಡಜ್ಜಿ ಬಸಪ್ಪ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘ(ರಿ) ರಾಜ್ಯ ಘಟಕವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಭಾರತದ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆಗಳು ಶೈಕ್ಷಣಿಕ ಕಿರುಚಿತ್ರ ಬಿಡುಗಡೆ ಮತ್ತು ಪುಸ್ತಕಗಳ ಬಿಡುಗಡೆ  ಸಂಘಧ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಸಾಹಿತ್ಯ ವೇದಿಕೆ ಲೋಗೋ ಬಿಡುಗಡೆ , “ನುಡಿಮುತ್ತು” ಸಿನಿಮಾದ ಪೋಸ್ಟರ್ ಬಿಡುಗಡೆ ಸಾಧಕ ನೌಕರರಿಗೆ ಸನ್ಮಾನ ಸಾಧನೆ ಮಾಡಿದ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಉದ್ಘಾಟನೆಯನ್ನು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವರವರು, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವೆ ಶ್ರೀಮತಿ ರಾಣಿ ಸತೀಶ್ , ಸಾಹಿತಿ ಪ್ರೋ.ರಾಧಕೃಷ್ಣ,  ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ನಿವೃತ್ತ ಐ.ಎ.ಎಸ್.ಅಧಿಕಾರಿ ಶ್ರೀಮತಿ ಮಮತಾ, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ರಾಷ್ಟ್ರದ್ಯಕ್ಷೆ ಡಾ.ಲತಾ ಮುಳ್ಳೂರ, ಇತಿಹಾಸ ಪ್ರಾಧ್ಯಪಕರಾದ ಪ್ರೋ.ಅನುರಾಧ, ಕೊಪ್ಪಳ ಜಿಲ್ಲಾ ಸಿ.ಇ.ಓ.ಮಲ್ಲಿಕಾರ್ಜುನ್,
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ
ರಾಜ್ಯಾಧ್ಯಕ್ಷರಾದ ಶ್ರೀಮತಿ ರಮಾ ಆರ್., ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಮತಿ ಸಿ.ವಿ.ಶೈಲಜರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

*ಸಚಿವರಾದ ದಿನೇಶ್ ಗುಂಡೂರಾವ್* ರವರು ಮಾತನಾಡಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಜೊತೆಯಲ್ಲಿ ಕೊಡುಗೆ ನೀಡಿದ್ದಾರೆ. ಮಹಿಳೆಯರು ಸಾಮಾನತೆ ಮತ್ತು ಸಮಾನ ಅವಕಾಶ ಸಿಗಬೇಕು.

ಪುರುಷರ ಚಿಂತನೆ ಮತ್ತು ಮನಸ್ಥಿತ ಬದಲಾಗಬೇಕು ಮಹಿಳೆಯರ ಕುರಿತು ಗೌರವ ಬೆಳಸಿಕೊಳ್ಳಬೇಕು.
ಸಮಾಜದಲ್ಲಿ ಬದಲಾವಣೆಯಾದಗ ಪರ,ವಿರೋಧ ಇರುತ್ತದೆ.

ಮಹಿಳೆಯರ ಪ್ರತಿಭೆಗೆ ಸಮಾನ ಅವಕಾಶ ನೀಡಿ, ಪ್ರೋತ್ಸಹ ನೀಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉತ್ತಮ ಮಹಿಳಾ ಅಧಿಕಾರಿ ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಮುಖ್ಯ ಕಾರ್ಯದರ್ಶಿಯಾಗಿ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದಾರೆ.

12ಶತಮಾನದ ಕ್ರಾಂತಿಯೋಗಿ ಬಸವೇಶ್ವರ ಅನುಭವ ಮಂಟಪದಲ್ಲಿ 60ಮಹಿಳಾ ಸದಸ್ಯರಿದ್ದರು, ತಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಮಹಿಳೆಯರು ಭಯಭೀತಿ ಇಲ್ಲದೇ, ಧೈರ್ಯವಾಗಿ  ಕೆಲಸ ಮಾಡಲು ರಕ್ಷಣೆ ನೀಡಲು ನಮ್ಮ ಜವಾಬ್ಬಾರಿಯಾಗಿದೆ. ಪುರುಷರು ನಾನೇ ಮೇಲು ಎಂಬ ಭಾವನೆ ಬೀಡಬೇಕು, ಮಹಿಳಾ ಅಧಿಕಾರಿ ನಿರ್ಭಿತಿಯಿಂದ ಕೆಲಸ ಮಾಡಲು ಪುರುಷರು ಸಹಕಾರ ನೀಡಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *