ನವದೆಹಲಿ : ‘ಮಹಾ ಕುಂಭ ಮೇಳ’ವನ್ನು ಏಕತೆಯ ಮಹಾಕುಂಭ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜದಿಂದ ದ್ವೇಷ ಮತ್ತು ವಿಭಜನೆಯನ್ನು ತೊಡೆದುಹಾಕುವ ಸಂಕಲ್ಪದೊಂದಿಗೆ ಭವ್ಯವಾದ ಧಾರ್ಮಿಕ ಸಭೆಯಿಂದ ಹಿಂತಿರುಗಿ ಎಂದು ಜನರಿಗೆ ಇಂದು ಮನವಿ ಮಾಡಿದ್ದಾರೆ.
ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 117ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ‘ಮಹಾಕುಂಭ್ ಕಾ ಸಂದೇಶ್ ಏಕ್ ಹೋ ಪೂರಾ ದೇಶ್ (ಇಡೀ ದೇಶವನ್ನು ಒಗ್ಗೂಡಿಸುವುದು ಮಹಾ ಕುಂಭದ ಸಂದೇಶ ಆಗಿರುಬೇಕು)’. ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಭೇಟಿ ನೀಡುವ ವಿವಿಧ ಜನರನ್ನು ಉಲ್ಲೇಖಿಸಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಸಾರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ ಎಂದು ಹೇಳಿದರು.
ಪ್ರತಿ 12 ವರ್ಷಗಳಿಗೊಮ್ಮೆ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಮುಂದಿನ ಗಣರಾಜ್ಯೋತ್ಸವವು ಸಂವಿಧಾನದ ಅನುಷ್ಠಾನದ 75ನೇ ವಾರ್ಷಿಕೋತ್ಸವ ಆಗಿದೆ. ಇದು ದೇಶವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ಸಂವಿಧಾನವು ಪ್ರತಿಯೊಂದು ಕಾಲಘಟ್ಟದಲ್ಲೂ ನಿಂತಿದೆ. ಇದು ನಮ್ಮ ಪಾಲಿಗೆ ಮಾರ್ಗದರ್ಶನ ನೀಡುವ ಬೆಳಕಾಗಿದೆ. ಸಂವಿಧಾನದಿಂದಲೇ ತಾನು ಇಂದು ಈ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು ಎಂದಿದ್ದಾರೆ.
ಜನರನ್ನು ಸಂವಿಧಾನದ ನಿಬಂಧನೆಗಳು ಮತ್ತು ಆತ್ಮದೊಂದಿಗೆ ಸಂಪರ್ಕಿಸಲು constitution75.com ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ಸಾಂವಿಧಾನಿಕ ಮೌಲ್ಯಗಳು ಮತ್ತು ಚೈತನ್ಯವನ್ನು ಬಲಪಡಿಸುವ ತಮ್ಮ ಸರ್ಕಾರದ ಪ್ರಯತ್ನಗಳನ್ನು ನಿರಂತರವಾಗಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಮಾರ್ಗದರ್ಶಿ ದಾಖಲೆಯನ್ನೇ ಬುಡಮೇಲು ಮಾಡಿದ್ದರು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.