ದೆಹಲಿ : ಮೆಟ್ರೋ ದರ ಏರಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ರ ಬರೆದರೆ ನಾಳೆಯೇ ಸಮಿತಿ ರಚನೆಯಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಈಗಾಗಿರುವ ದರ ಪರಿಷ್ಕರಣೆಯನ್ನುಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ ಎಂದು ಹೇಳಿದರು.

ನಾನು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಈ ಪ್ರಯಾಣಿಕರ ಸಂಖ್ಯೆ ಕುಸಿತದ ಬಗ್ಗೆಯೂ ಗಮನಕ್ಕೆ ತರಲಾಗಿದೆ. ಅವರು ರಾಜ್ಯ ಸರ್ಕಾರ ಮತ್ತೊಮ್ಮೆ ಪತ್ರ ಬರೆದು ದರ ಪರಿಷ್ಕರಣೆ ಮಾಡಲು ಮನವಿ ಮಾಡಿದರೆ ಮತ್ತೊಮ್ಮೆ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಮೆಟ್ರೋ ದರಗಳು ಏರಿಕೆಯಾಗಿ ಜನರಿಗೆ ಸಮಸ್ಯೆಯಾಗಿದೆ. ಮಧ್ಯಮ ವರ್ಗದ ಜನರಿಗೆ ಇನ್ನು ತೊಂದರೆಯಾಗಿದೆ. ಏಕಾಏಕಿ ಮೆಟ್ರೋ ದರವನ್ನು 50%, 100% ಏರಿಕೆಯಾಗಿದೆ. ಸಂಬಳದ ದೊಡ್ಡ ಭಾಗ ಈಗ ಮೆಟ್ರೋಗೆ ಕೊಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಅಧಿಕಾರಿಗಳು ದರ ನಿಗದಿ ಮಾಡಲು ಸಮಿತಿ ರಚಿಸುವ ಪ್ರಕ್ರಿಯೆ ಶುರು ಮಾಡಿದರು. ಮೆಟ್ರೋ ಕಂಪನಿ ಮತ್ತು ರಾಜ್ಯ ಸರ್ಕಾರ ದರ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡುತ್ತದೆ. ಸಮಿತಿ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ನಿಂದ ಮಾಹಿತಿ ಪಡೆದು ಪರಿಷ್ಕೃತ ದರ ಪಟ್ಟಿ ನಿಗದಿ ಮಾಡುತ್ತದೆ. ಸಮಿತಿ ನಿಗದಿ ಮಾಡಿದ ದರ ಪರಿಷ್ಕರಣೆಯನ್ನು ಅನುಷ್ಠಾನ ಮಾಡಬೇಕು ಎಂದು ಕಾನೂನು ಹೇಳುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *