ಕೆ.ಆರ್.ಪೇಟೆ: ಸಂತೆಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಿ.ಎಂ.ಸಿ ಘಟಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಗ್ರಾಮದ ಜನರು ಗ್ರಾಮಕ್ಕೆ ಕಲ್ಪಿಸುವ ಮುಖ್ಯ ರಸ್ತೆ ಮಾಜಿ ಸಚಿವ ನಾರಾಯಣಗೌಡರ ಕಾಲದಲ್ಲೇ ಸಂಪೂರ್ಣ ರಸ್ತೆ ಹದಗೆಟ್ಟು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿ ಈ ಅದ್ವಾನದ ವ್ಯವಸ್ಥೆಗೆ ಓರ್ವ ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೆಗೆ.
ಪ್ರತಿಕ್ರೀಯಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ನನ್ನ ಕ್ಷೇತ್ರದ ಜನ ಬಹು ನಿರೀಕ್ಷೆ ಇಟ್ಟು ಒಂದು ಉನ್ನತ ಜವಾಬ್ದಾರಿ ಸ್ಥಾನಕ್ಕೆ ಕಳಿಸಿದ್ದೀರಿ ಆದರೆ ಪ್ರಸ್ತುತವಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಜೊತೆಗೆ ಸ್ವತಹ ತಮ್ಮ ಸಚಿವರ ಹಾಗೂ ಶಾಸಕರ ಕ್ಷೇತ್ರಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ.ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಶಾಸಕರಾಗಿದ್ದೇನೆ. ಆದರೂ ಸುಮ್ಮನೆ ಕೂರುವ ಸೋಂಬೇರಿ ಶಾಸಕ ನಾನಲ್ಲ ಹೋರಾಟದ ಮೂಲಕವೇ ಅನುದಾನತಂದು ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.