ಹುಬ್ಬಳ್ಳಿ: ಬಿಜೆಪಿ ನಮ್ಮ ಶಾಸಕರ‌ ಖರೀದಿಗೆ ಮುಂದಾಗಿದೆ ಅಂತಾ ಗಾಣಿಗ ರವಿಕುಮಾರ ಹೇಳಿದ್ದಾರೆ.
ಶಾಸಕ ಗಾಣಿಗ ರವಿಕುಮಾರ ಹೇಳಿಕೆ ಸತ್ಯಕ್ಕೆ ದೂರವಾದ ಮಾತಾಗಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜೋಶಿ, ಶೋಭಾ ಸೇರಿ‌ ಹಲವರ ಹೆಸರು ಪ್ರಸ್ತಾಪಿಸಿ ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಒಡೆದ ಮನೆಯಾಗಿದೆ. ಅದನ್ನು ಮರೆಮಾಚುವ ನಿಟ್ಟಿನಲ್ಲಿ ಇನ್ನೊಂದು‌ ಪಕ್ಷದ ಮೇಲೆ ಗೂಬೆ ಕುರಿಸುವ ಕೆಲಸ ಇದು. ಶಾಸಕ ಗಾಣಿಗ ರವಿಕುಮಾರ ಹೇಳಿಕೆಗೆ ನಮ್ಮ ಪಕ್ಷದಿಂದ ಈಗಾಗಲೇ ಠಾಣೆಗಳಲ್ಲಿ ದೂರು ಕೂಡಾ ನೀಡಲಾಗಿದೆ ಎಂದರು.

ಸಿಎಂ ಅವರು ಮುಡಾ ಹಾಗೂ ವಾಲ್ಮೀಕಿ ಹಗರಣದಿಂದಾಗಿ ಬದಲಾಗುವುದು ಅವರಿಗೆ ನಿಶ್ಚಿತವಾಗಿದೆ. ತಮ್ಮ ಪಕ್ಷದ ಆತಂರಿಕ ದುರಾಡಳಿತ ಮರೆಮಾಚುವ ದೃಷ್ಠಿಯಿಂದ ಈ ರೀತಿ ಹೇಳಿಕೆಯ ಮೂಲಕ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಕೈ ಪಕ್ಷದಲ್ಲಿ ಆತಂರಿಕ ವಿಚಾರಗಳು ಹೊರಗೆ ಬರುತ್ತಿತ್ತಿದಂತೆ ಹೊಸ ನಾಟಕ ಆರಂಭಿಸುತ್ತಾರೆ. ಗಾಣಿಕ ರವಿಕುಮಾರ ಆರೋಪದಲ್ಲಿ‌ ಯಾವುದೇ ಹುರುಳಿಲ್ಲ. ನಮ್ಮ ಪಕ್ಷದಿಂದ ಯಾವುದಾದರೂ ಆಫರ್ ಬಂದಿದ್ದರೆ ಅದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಬಹಿರಂಗ ಪಡಿಸದೇ ಇದ್ದಲ್ಲಿ ಮಾನ ನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡದ ಅವರು, ಸಿಎಂ ಬದಲಾವಣೆ ವಿಷಯ ದಟ್ಟವಾಗುತ್ತಿದಂತೆ ವಿಪಕ್ಷಗಳ ಮೇಲೆ ಈ ರೀತಿ ಹೇಳಿಕೆ ಸರಿಯಲ್ಪ. ಗಾಣಿಗ ರವಿಕುಮಾರ ಅವರು ಡಿಕೆಶಿ‌ ಪರಾಮಾಪ್ತರು. ಸಿದ್ದರಾಮಯ್ಯ ಇಳಿಯುತ್ತಿದಂತೆ ಡಿಕೆಶಿ ಸಿಎಂ ಮಾಡಲು ಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆ ಸತೀಶ ಜಾರಕಿಹೊಳ್ಳಿ ಬಣ ಆ್ಯಕ್ಟಿವ್ ಆಗಿದೆ. ಅವರ ಪಕ್ಷದ ಆತಂರಿಕ ವಿಷಯ ಮುಚ್ಚಿಕೊಳ್ಳಲು ಈ ರೀತಿ ಗಾಣಿಗ ರವಿಕುಮಾರ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *