ನವದೆಹಲಿ : ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ಮಾರ್ಚ್ 27 ರಂದು ಸಂಸತ್ತಿನಲ್ಲಿ ವಿಕ್ಕಿ ಕೌಶಲ್ ನಟನೆಯ ʼಛಾವಾʼ ಸಿನಿಮಾ ವೀಕ್ಷಿಸಲು ನಿರ್ಧಾರ ಮಾಡಿದ್ದಾರೆ.
ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ʼಛಾವಾʼ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಿದ್ದು, ಈ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ. ಜೊತೆಗೆ, ಚಿತ್ರದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಇಡೀ ಚಿತ್ರತಂಡವೂ ಹಾಜರಾಗಲಿದ್ದಾರೆ.
ʼಛಾವಾʼ ಚಿತ್ರವು ʼಲಕ್ಷ್ಮಣ್ ಉಟೇಕರ್ʼ ಅವರ ನಿರ್ದೇಶನದಲ್ಲಿ ಫೆ.14 ರಂದು ದೇಶಾದ್ಯಾಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜರ ಧೈರ್ಯ ಮತ್ತು ಆತನಿಂದ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ.
ಈ ಚಿತ್ರದ ಬಗ್ಗೆ ದೇಶಾದ್ಯಾಂತ ಸಂಚಲನ ಸೃಷ್ಟಿಯಾಗಿ, ಪ್ರಗತಿಶೀಲ ಮಾತುಗಳನ್ನು ಹೊತ್ತಿರುವ ಈ ಚಿತ್ರವನ್ನು ಕಳೆದ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.