ಬೆಂಗಳೂರು : ನನಗೆ ಇರುವುದು ಒಬ್ಬಳೇ ತಂಗಿ. ನನಗೆ ಗೊತ್ತಿಲ್ಲದೆ ಇನ್ನೊಬ್ಬ ತಂಗಿ ಯಾರು ಎಂದು ನಮ್ಮ ಅಣ್ಣಾ ಬೇಜಾರಾಗಿದ್ದಾನಂತೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂದು ಕೇಳಿದಾಗ, “ನಾನು ಕೂಡ ನಾಲ್ಕೈದು ದಿನಗಳ ಹಿಂದೆ ಇದನ್ನು ಗಮನಿಸಿದೆ.
ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ತನಿಖೆ ಮಾಡಲಿ. ನಾನು ಇದನ್ನು ಪರಿಶೀಲಿಸಿ, ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, 2-3 ದಿನಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಮಾತನಾಡಿದ ಅವರು ಯಾರೇ ಈ ತಪ್ಪು ಮಾಡಿದ್ದರೂ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಬೇಕು” ಎಂದು ತಿಳಿಸಿದರು. ಶ್ವೇತಾ ಗೌಡ ಅವರ ಪ್ರಕರಣದಲ್ಲಿ ಬಿಜೆಪಿ ನಾಯಕನ ಹೆಸರು ಕೇಳಿಬಂದಾಗ ಬಂಧನ ಆಗಿ ವಿಚಾರಣೆ ನಡೆಯುತ್ತಿದೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಈ ತಾರತಮ್ಯ ಏಕೆ ಎಂದು ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಕೇಳುತ್ತೇನೆ” ಎಂದು ತಿಳಿಸಿದರು.
ನಟ ಧರ್ಮ ಅವರು ನಿಮ್ಮ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಕೇಳಿದಾಗ, “ಕೆಲವು ಸಿನಿಮಾದವರು ಸೇರಿ ಈ ರೀತಿ ಮಾಡುತ್ತಿದ್ದಾರೆ. ನಾನು ಏನು ಮಾಡಲಿ. ಈ ಪ್ರಕರಣದ ಬಗ್ಗೆ ನಾನು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಿದ್ದೇನೆ. ನಿಮಗೂ ಆ ದೂರಿನ ಪತ್ರ ಕಳುಹಿಸಿಕೊಡುತ್ತೇನೆ” ಎಂದು ತಿಳಿಸಿದರು.
ಐಶ್ವರ್ಯಾ ಅವರು ಕಾಂಗ್ರೆಸ್ ಸೇರಿದ್ದರಾ ಎಂದು ಕೇಳಿದಾಗ, “ಅವರು ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಮತ್ತೊಮ್ಮೆ ಅಣ್ಣಮ್ಮ ದೇವಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಷ್ಟು ಬಿಟ್ಟರೆ ನನಗೂ ಆಕೆಗೂ ಬೇರೆ ಸಂಬಂಧ ಇಲ್ಲ. ನನಗೆ ಇರುವುದು ಒಬ್ಬಳೇ ತಂಗಿ. ನನಗೆ ಗೊತ್ತಿಲ್ಲದೆ ಇನ್ನೊಬ್ಬ ತಂಗಿ ಯಾರು ಎಂದು ನಮ್ಮ ಅಣ್ಣಾ ಬೇಜಾರಾಗಿದ್ದಾನಂತೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಆಕೆ ನಿಮಗೆ ಬೆಳ್ಳಿ ಖಡ್ಗ ಕೊಟ್ಟಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಕೇಳಿದಾಗ, “ನಾನು ಆ ಕ್ಷಣದಲ್ಲೇ ಅದನ್ನು ದೇವಸ್ಥಾನಕ್ಕೆ ವಾಪಸ್ ನೀಡಿದ್ದೆ. ನಾನು ಹಾಗೂ ನನ್ನ ಅಣ್ಣ ಅಂತಹ ಉಡುಗೊರೆಯನ್ನು ಅಲ್ಲೇ ವಾಪಸ್ ನೀಡುತ್ತೇವೆ. ಅವುಗಳನ್ನು ಮನೆಗೆ ವಾಪಸ್ ತರುವುದಿಲ್ಲ” ಎಂದು ಹೇಳಿದರು.