ಮುಂಬೈ : ನಾಗ್ಪುರದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿ ಫಹೀಮ್ ಖಾನ್‍ನ ಮನೆ ಹಾಗೂ ಇತರ ಕಟ್ಟಡಗಳ ಮೇಲೆ ಮಹಾರಾಷ್ಟ್ರ ಸರ್ಕಾರ ಬುಲ್ಡೋಜರ್ ಚಲಾಯಿಸಿದೆ.

ಫಹೀಮ್ ಖಾನ್ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಕ್ಕಾಗಿ, ನಾಗ್ಪುರ ಪಾಲಿಕೆಯಿಂದ ಮೊದಲು ನೋಟಿಸ್ ನೀಡಲಾಗಿತ್ತು. ಈಗ ಅಧಿಕಾರಿಗಳು ಬುಲ್ಡೋಜರ್ ಮೂಲಕ ಆ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಮಹಾರಾಷ್ಟ್ರ ಸರ್ಕಾರದ ಯತ್ನಾಳ್ ಸ್ವಾಗತಿಸಿದ್ದಾರೆ.

ನಾಗ್ಪುರ ಹಿಂಸಾಚಾರ ಪ್ರಕರಣದಲ್ಲಿ ಎರಡು ಪ್ರಮುಖ ಆರೋಪಿಗಳ ಆಸ್ತಿಗಳನ್ನು ಸೋಮವಾರ (ಮಾ.24) ನೆಲಸಮ ಮಾಡಿದ ನಂತರ, ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಸಿ) ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ವೃಶಾಲಿ ಜೋಶಿ ಅವರಿದ್ದ ವಿಭಾಗೀಯ ಪೀಠವು, ಈ ಕಾರ್ಯಾಚರಣೆಯನ್ನು ‘ಉಗ್ರವಾದ ವರ್ತನೆ’ ಎಂದು ವಿವರಿಸಿತು.

“ಅಕ್ರಮವಾದ ಮನೆಗಳಲ್ಲಿ ಮಾಲೀಕರಿಗೆ ನೋಟಿಸ್ ನೀಡಲಿಲ್ಲ, ಮತ್ತು ಆಸ್ತಿಯನ್ನು ಕೆಡವುವ ಮೊದಲು ಅವರ ವಿಚಾರಣೆ ಮಾಡಲು ಕಾರಣವೇನು?” ಎಂದು ಪೀಠವು ಎನ್‌ಎಂಸಿಯನ್ನು ಪ್ರಶ್ನಿಸಿತು. “ಈ ಕಾರ್ಯಾಚರಣೆ ಧರ್ಮದ ಆಧಾರದ ಮೇಲೆ ಆಯೋಜಿಸಲಾಗಿದೆ ಎಂದು ಪ್ರಶ್ನಿಸಲಾಗಿದೆ,” ಎಂದು ನ್ಯಾಯಮೂರ್ತಿಗಳು ಹೇಳಿದರು. ಜೊತೆಗೆ, ನ್ಯಾಯಾಲಯ ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಆದೇಶಿಸಿತು.

ಮಾರ್ಚ್ 17ರಂದು ನಾಗ್ಪುರದಲ್ಲಿ ಹುಟ್ಟಿದ ಗಲಭೆಯ ಮಾಸ್ಟರ್‌ಮೈಂಡ್ ಎಂದು ಫಹೀಮ್ ಶಮೀಮ್ ಖಾನ್‍ನ್ನು ನಾಗ್ಪುರ ಪೊಲೀಸರು ಮಾರ್ಚ್ 19ರಂದು ಬಂಧಿಸಿದ್ದರು. ಮೈನಾರಿಟೀಸ್ ಡೆಮೋಕ್ರಟಿಕ್ ಪಾರ್ಟಿಯ ನಗರ ಅಧ್ಯಕ್ಷನಾಗಿದ್ದ ಫಹೀಮ್, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ.

ಹಿಂಸಾಚಾರ ಆರಂಭವಾಗುವ ಮೊದಲು ಫಹೀಮ್ ಮಾಡಿದ ಭಾವನಾತ್ಮಕ ಭಾಷಣವು ಎರಡು ಸಮುದಾಯಗಳ ನಡುವಣ ಘರ್ಷಣೆಗೆ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪುಣೆಯಲ್ಲಿ ಇತ್ತೀಚೆಗೆ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ವಲ್ ಭುಯಾನ್, “ಬುಲ್ಡೋಜರ್ ನ್ಯಾಯ” ಸಂವಿಧಾನದ ವಿರುದ್ಧ ನಡೆಯುವ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದರು.

Leave a Reply

Your email address will not be published. Required fields are marked *