ಬೆಂಗಳೂರು: ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ನಡುವೆ ನಾಳೆಯಿಂದ ಆಗಸ್ಟ್ 15ರ ವರೆಗೆ ಮೆಟ್ರೋ ರೈಲು ಸೇವೆಯಲ್ಲಿ ಅಲ್ಪ ಬದಲಾವಣೆಗಳಾಗಿದ್ದು ನಾಗಸಂದ್ರ ಟೂ ಮಾದಾವರ (BIEC) ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಬೆಳಗ್ಗೆ ಹೊರಡುವ ಸಮಯ ಹಾಗೂ ಕೊನೆಯ ರೈಲಿನ ವೇಳಾಪಟ್ಟಿಯಲ್ಲಿ ಮೂರು ದಿನ ಬದಲಾವಣೆ ಆಗಲಿದೆ ಎಂದು ಬಿಎಆರ್‌ಸಿಎಲ್‌ ತಿಳಿಸಿದೆ. ಸಿಗ್ನಲಿಂಗ್ ಪರೀಕ್ಷೆ ನಡೆಸಬೇಕಾಗಿರುವ ಹಿನ್ನಲೆ ಸಂಚಾರದಲ್ಲಿ ವ್ಯತ್ಯ ಆಗಲಿದೆ. ಆದರೆ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾದ್ರೆ ಸಮಯದ ವೇಳಾಪಟ್ಟಿ ಹೇಗೆ ಅನ್ನುವ ಕುರಿತು ಮಾಹಿತಿ ಇಲ್ಲಿದೆ.

  1. ಆಗಸ್ಟ್ 13 ರಂದು ಕೊನೆಯ ರೈಲು ಸೇವೆ ರಾತ್ರಿ 11 ರ ಬದಲಾಗಿ 10 ಗಂಟೆಯವರೆಗೆ ಸಂಚಾರ ಇರಲಿದೆ.
  2. ಆಗಸ್ಟ್ 14 ರಂದು ಬೆಳಿಗ್ಗೆ 5ರ ಬದಲಾಗಿ 6ಕ್ಕೆ ಸಂಚಾರ ಪ್ರಾರಂಭವಾಗಲಿದೆ.

ಕೊನೆಯ ರೈಲು ಸೇವೆ ರಾತ್ರಿ 11ರ ಬದಲಾಗಿ 10 ಗಂಟೆಯವರೆಗೆ ಇರಲಿದೆ.

  1. ಆಗಸ್ಟ್ 15 ರಂದು ಬೆಳಿಗ್ಗೆ 5ರ ಬದಲಾಗಿ 6 ಗಂಟೆಯಿಂದ ಸಂಚಾರ ಆರಂಭಿಸಲಿವೆ.

ನಾಗಸಂದ್ರ ನಿಲ್ದಾಣದಿಂದ ಆಗಸ್ಟ್ 13 ಮತ್ತು 14ರಂದು ಕೊನೆಯ ರೈಲು ಸೇವೆಯು ರಾತ್ರಿ 11 ಗಂಟೆಯ ಬದಲಾಗಿ 10 ಗಂಟೆಗೆ ಕೊನೆಗೊಳ್ಳುತ್ತದೆ.

ಆಗಸ್ಟ್ 14 ಮತ್ತು 15 ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು,

ಬೆಳಿಗ್ಗೆ 5ರ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.

ಆದಾಗ್ಯೂ, ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ,

ಆಗಸ್ಟ್ 13 ಮತ್ತು 14 ರಂದು ರಾತ್ರಿ 11.12 ಗಂಟೆಯವರೆಗೆ
ಕೊನೆಯ ರೈಲು ಸೇವೆ ಲಭ್ಯವಿರುತ್ತದೆ.

ಪೀಣ್ಯ ಇಂಡಸ್ಟ್ರಿಯಿಂದ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ,

ಆಗಸ್ಟ್ 14 ಮತ್ತು 15 ರಂದು ಬೆಳಿಗ್ಗೆ 5 ಗಂಟೆಗೆ ಸಂಚಾರ ಪ್ರಾರಂಭವಾಗುತ್ತದೆ.

ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Leave a Reply

Your email address will not be published. Required fields are marked *