ನಮ್ಮ ಮೆಟ್ರೋದಲ್ಲಿ ಒಳಾಂಗಣ ಜಾಹೀರಾತುಗಳಿಂದ ಕನಿಷ್ಠ 30-35 ಕೋಟಿ ಗಳಿಸುವ ನಿರೀಕ್ಷೆಯಿದೆ ಎನ್ನುತ್ತಾರೆ BMRCL ಮುಖ್ಯಸ್ಥರು.

ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ (BBMP) ಸಂಸ್ಥೆಗೆ ನೂರಾರು ಕೋಟಿ ರೂಪಾಯಿ ಆದಾಯ ತರುತ್ತಿದ್ದ ಆದರೆ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಅವಕಾಶ ಕಲ್ಪಿಸುತ್ತಿದ್ದ ಹೊರಾಂಗಣ ಜಾಹೀರಾತಿಗೆ ಹೈಕೋರ್ಟ್​​ ತಪರಾಕಿ ಕೊಟ್ಟು ಸ್ಥಗಿತಗೊಳಿಸಿದೆ. ನಗರದಲ್ಲಿ ರಸ್ತೆ ಬದಿಗಳಲ್ಲಿ ಜಾಹೀರಾತುಗಳು ಈಗ ಕಾಣೆಯಾಗಿವೆ. ಆದರೆ ಈ ಮಧ್ಯೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 50 ಮೆಟ್ರೋ ನಿಲ್ದಾಣಗಳಲ್ಲಿ ಒಳಾಂಗಣ ಜಾಹೀರಾತಿಗಾಗಿ (Advertisement) ಟೆಂಡರ್ ಕರೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಟೆಂಡರ್ ಡಾಕ್ಯುಮೆಂಟ್ ಪ್ರಕಾರ ಜಾಹೀರಾತುಗಳನ್ನು ಪ್ರದರ್ಶಿಸಲು ಸುಮಾರು 70,000 ಚದರ ಅಡಿ ಸ್ಥಳಾವಕಾಶವಿದೆ. ಮತ್ತು ಅದರಲ್ಲಿ ಸುಮಾರು 5 % ಡಿಜಿಟಲ್ ಜಾಹೀರಾತು ಪ್ರಚಾರಕ್ಕಾಗಿ ಕಾಯ್ದಿರಿಸಲಾಗಿದೆ. BMRCL ಅಧಿಕಾರಿಗಳ ಪ್ರಕಾರ, ಮೆಟ್ರೋ ನಿಲ್ದಾಣಗಳ (Namma Metro) ಮೂಲಕ ತನ್ನ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಜಾಹೀರಾತುದಾರರ ಬೇಡಿಕೆಗೆ ಅನುಗುಣವಾಗಿ ಜಾಹಿರಾತು ಸ್ಥಳ ನೀಡಲು ಟೆಂಡರ್ ಕರೆಯಲಾಗಿದೆ.

ಒಳಾಂಗಣ ಜಾಹೀರಾತು ಸ್ಥಳಗಳೆಂದರೆ ಮೆಟ್ಟಿಲುಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು ಮತ್ತು ಫ್ರಿಸ್ಕಿಂಗ್ ಪ್ಯಾನೆಲ್‌ಗಳನ್ನು ಒಳಗೊಂಡಿರುತ್ತದೆ. ಜಾಹೀರಾತು ಬಿಡ್​​ದಾರರು BMRCL ನಿಂದ ಅನುಮೋದನೆಯನ್ನು ಪಡೆದರೆ, ಅವರು ಹೆಚ್ಚುವರಿ ಜಾಹೀರಾತು ಸ್ಥಳವನ್ನು ರಚಿಸಿಕೊಳ್ಳಲು, ಪ್ಲಾಟ್‌ಫಾರ್ಮ್ ಪರದೆಯ ಬಾಗಿಲುಗಳನ್ನು ಸಹ ಬಳಸಿಕೊಳ್ಳಬಹುದು. ಮೆಟ್ರೋ ಕಾರ್ಪ್ ಇಂಡೋರ್ ಜಾಹೀರಾತಿನ ಮೂಲಕ ಅಂದಾಜು 30-35 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ ಎಂದು ಅಂಜುಮ್ ಪರ್ವೇಜ್, ಮ್ಯಾನೇಜಿಂಗ್ ಡೈರೆಕ್ಟರ್, BMRCL ತಿಳಿಸಿದ್ದಾರೆ.

Leave a Reply

Your email address will not be published. Required fields are marked *