ಧಾರ್ಮಿಕ ವಿಚಾರಕ್ಕೆ ಅನುಸಾರವಾಗಿ, ಜಾತಕ ಸಾಲಾವಳಿ, ಇವುಗಳನ್ನ ನೋಡಿದ ನಂತರವೂ, ಈ ವಿಷಯಗಳನ್ನು ಗಮನದಲ್ಲಿಡಿ, ಏಕೆಂದರೆ,ಜೀವನದಲ್ಲಿ ಮದುವೆ ಯಾಗುವುದು ಒಂದೇ ಬಾರಿ ಅಲ್ಲಿ ಏನಾದರೂ ಸ್ವಲ್ಪ ಎಡವಿದರೂ, ಜೀವಮಾನ ವಿಡಿಸಮಸ್ಯೆಗಳನ್ನು, ಅನುಭವಿಸ ಬೇಕಾಗುತ್ತದೆ, ಆದ್ದರಿಂದ ಮದುವೆಗೆ ಮುನ್ನ ಹೆಣ್ಣಾಗಲಿ ಗಂಡಾಗಲಿ ಸೂಕ್ತ ನಿರ್ಧಾರವನ್ನು ತೆಗೆದು ಕೊಳ್ಳಬೇಕು,

01🌹, ಇಬ್ಬರ ನಡತೆಯ ಪ್ರಮಾಣ ಪತ್ರ,{ ಕ್ಯಾರೆಕ್ಟರ್ ಸರ್ಟಿಫಿಕೇಟ್}

02🌹, ಇಬ್ಬರ ಕುಟುಂಬ ಪ್ರಮಾಣ ಪತ್ರ, { ಕ್ಯಾಸ್ಟ್ ಸರ್ಟಿಫಿಕೇಟ್ }

03🌹,ಆದಾಯ ಪ್ರಮಾಣ ಪತ್ರ,{ ಇನ್ಕಮ್ ಸರ್ಟಿಫಿಕೇಟ್ }

ಇವೆಲ್ಲದರ ಜೊತೆಗೆ ಮದುವೆಯಾದ ನಂತರ ನಿಮಗೆ ಮಕ್ಕಳನ್ನು ಮಾಡಿಕೊಳ್ಳುವ ಇಚ್ಛೆ ಇದೆಯೇ,

ನೀವು ಅತ್ತೆ ಮಾವಂದಿರ ಜೊತೆಗೆ ಬದುಕುತ್ತೀರಾ, ಅಥವಾ ಬೇರೆಯಾಗಿರುತ್ತೀರಾ,

ನೀವು ಮದುವೆಯಾದ ಮೇಲೆ ಉದ್ಯೋಗ ಮಾಡಲು ಬಯಸುತ್ತೀರಾ,

ನಿಮಗೆ ಮದುವೆಯಾಗುವ ಮೊದಲು, ಗೆಳೆಯರು / ಗೆಳತಿಯರು ಇದ್ದಾರೆಯೇ,*

ನಿಮಗೆ ಮದುವೆ ಆಗುವ ಮೊದಲೇ ಏನಾದರೂ ಸಂಪರ್ಕವಿದೆಯೇ,

ನಿಮಗೆ ಮದುವೆಯಾಗುವ ಮುಂಚೆ ಏನಾದರೂ ಅಭ್ಯಾಸಗಳಿದ್ದರೆ:-

🪷,ಈ ತರಹದ ಹಲವಾರು ವಿಷಯಗಳನ್ನು, ಮದುವೆಯಾಗುವ ಮೊದಲೇ, ಕುಳಿತು ಮಾತನಾಡಿ, ನಂತರ ಮದುವೆಯಾಗುವ ತೀರ್ಮಾನವನ್ನು ತೆಗೆದುಕೊಳ್ಳಿ, ಇದರಿಂದ ನಿಮ್ಮ ಪಾಲಕರ ಮಾನಸಿಕ ಸ್ಥಿತಿ ಚೆನ್ನಾಗಿರುತ್ತದೆ, ಹಾಗೂ ಅವರ ಉಳಿದ ಜೀವನ, ಆರೋಗ್ಯಕರವಾಗಿ ಹಾಗೂ ಸುಂದರವಾಗಿರುತ್ತದೆ, ಕಾರಣ ಅವರ ಕಣ್ಣೀರನ್ನು ನೀವು ನೋಡಬೇಕಾಗಿರುವುದಿಲ್ಲ, ಯೋಚಿಸಿ ಮದುವೆಯಾಗಿ ಸಂತೋಷವಾಗಿರಿ

Leave a Reply

Your email address will not be published. Required fields are marked *