ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಹೊಸ ವರ್ಷದಲ್ಲಿ ತಮ್ಮ ಅಭಿಮಾನಿಗಳಿಗೆ ಆಶ್ಚರ್ಯಕರ ಉಡುಗೊರೆಯೊಂದನ್ನು ನೀಡಿದ್ದಾರೆ. ನೀರಜ್ ಚೋಪ್ರಾ ತಮ್ಮ ವೈಯಕ್ತಿಕ ಜೀವನವನ್ನು ಆರಂಭಿಸಿದ್ದು, ಹಿಮಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ನೀರಜ್ ಅವರ ಪತ್ನಿ ಹಿಮಾನಿ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ ಮತ್ತು ನೀರಜ್ ಕೂಡ ಈ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಇವರಿಬ್ಬರೂ ಸ್ನೇಹಿತರೇ ಅಥವಾ ನೀರಜ್ ಮನೆಯವರು ನೋಡಿದ ಹುಡುಗಿಯನ್ನು ವರಿಸಿದ್ದಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ.

ಹಿಮಾನಿ ಯಾರು? – ಹಿಮಾನಿ ಸೋನಿಪತ್‌ನವರಾಗಿದ್ದು, ಅಮೆರಿಕದಲ್ಲಿ ಓದುತ್ತಿದ್ದಾರೆ. ನೀರಜ್ ಅವರ ಚಿಕ್ಕಪ್ಪ ಭೀಮ್ ಅವರ ಮಾಹಿತಿಯ ಪ್ರಕಾರ, ಹುಡುಗಿಯ ಬಗ್ಗೆ ಮಾಹಿತಿ ನೀಡಿರುವ ಅವರು ಹಿಮಾನಿ ಸೋನಿಪತ್‌ನವರಾಗಿದ್ದು ಅಮೆರಿಕದಲ್ಲಿ ಓದುತ್ತಿದ್ದಾಳೆ. ಮದುವೆಯ ಬಳಿಕ ಅವರಿಬ್ಬರು ಹನಿಮೂನ್‌ಗೆ ತೆರಳಿದ್ದು, ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜನವರಿ 19 ರಂದು ತಮ್ಮ ಮದುವೆಯ 3 ಫೋಟೋಗಳನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೀರಜ್ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ವಾಸ್ತವವಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ನೀರಜ್ ಚೋಪ್ರಾ ಮದುವೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು.

ಇದಲ್ಲದೆ ನೀರಜ್ ಯಾವಾಗ ಮದುವೆಯಾಗುತ್ತಾರೆ ಅಥವಾ ಅವರ ಪ್ರೇಯಸಿ ಯಾರು ಎಂಬ ಪ್ರಶ್ನೆಗಳನ್ನು ಈ ಹಿಂದೆಯೇ ನೀರಜ್​ಗೆ ಕೇಳಲಾಗಿತ್ತು. ಆದರೆ ನೀರಜ್ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಆದರೆ ಇದೀಗ ಸದ್ದಿಲ್ಲದೇ ಮದುವೆಯಾಗಿರುವ ನೀರಜ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *