ನಮ್ಮ‌ ಹಿಂದೂ ಸಂಪ್ರದಾಯದಲ್ಲಿ ಬಹಳ ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಭೀಮನ‌ ಅಮವಾಸ್ಯೆ, ಭಾನುವಾರ (ಆ.4) ರಂದು ಭೀಮನ ಅಮಾವಾಸ್ಯೆಯ ಪ್ರಯುಕ್ತ ಧಾರ್ಮಿಕವಾಗಿ ಅನೇಕರು ಅದ್ದೂರಿಯಾಗಿ ಆಚರಿಸಿದ್ದಾರೆ. ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ವಿದಿವಿಧಾನಗಳು ಸಹ ನಡೆದಿವೆ. ವಿಶೇಷವಾಗಿ ಭೀಮನ ಅಮಾವಾಸ್ಯೆ ಅಂಗವಾಗಿ ಚಾಮರಾಜನಗರ ತಾಲೂಕಿನ ಸಂತೆ ಮರಳಿ ಗ್ರಾಮದಲ್ಲಿರುವ ಮಾದಪ್ಪನ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ದೇವರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಹಿಂದೂ ಸಂಪ್ರದಾಯದಂತೆ ನಮ್ಮ ಹಿಂದೂಗಳು ಭೀಮನ ಅಮಾವಾಸ್ಯೆಯನ್ನು ಶ್ರದ್ದಾಭಕ್ತಿಯಿಂದ ಹಾಗೂ ಪೂರ್ಣ ಮನಸ್ಸಿನಿಂದ ಆಚರಿಸುತ್ತಾರೆ. ಅದರಲ್ಲೂ ಪತಿಯ ಪಾದಪೂಜೆ ಮಾಡುವ ಮೂಲಕ ಪತ್ನಿಯು ತನ್ನ ಗಂಡನ ಹೆಚ್ಚಿನ ಆಯಸ್ಸು ಹಾಗೂ ಯಶಸ್ಸಿಗಾಗಿ ವಿಶೇಷವಾಗಿ ಆಚರಣೆ ಮಾಡುತ್ತಾರೆ ಎನ್ನಬಹುದು. ಜೊತೆಗೆ ಹಿಂದೂ ದೇವಾಲಯಗಳಲ್ಲೂ ಸಹ ವಿಶೇಷ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಚಾಮರಾಜನಗರ ತಾಲೂಕಿನ ಸಂತೆಮರಳ್ಳಿ ಗ್ರಾಮದಲ್ಲಿನ ಮಾದಪ್ಪನ ದೇವಾಲಯದಲ್ಲೂ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಇನ್ನೂ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಿಳಾ ಭಕ್ತರು ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಜೊತೆಗೆ ಯುವಕ ಯುವತಿರು ಭೀಮನ ಅಮವಾಸ್ಯೆಯನ್ನು ಸಾಂಪ್ರದಾಯಕವಾಗಿ ಉಡುಗೆ ತೊಡುಗೆ ತೊಟ್ಟು ದೇವರ ದರ್ಶನ ಪಡೆದುಕೊಂಡರು.

Leave a Reply

Your email address will not be published. Required fields are marked *