ತುಮಕೂರು : ಇದೇ ವೇಳೆ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮೈಕ್ರೋ ಫೈನಾನ್ಸ್ ಬಗ್ಗೆ ನಿನ್ನೆ ಸರ್ಕಾರ ಸಭೆ ನಡೆಸಿದೆ. ಇರೋ ಕಾನೂನು ಭದ್ರ ಮಾಡುವುದು ಹಾಗೂ ಹೊಸ ಕಾನೂನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ. ಕಿರುಕುಳ ಕೊಡದಂತೆ ನಿರ್ದೇಶನ ನೀಡಲಾಗಿದೆ.

ಒಂದು ವಾರದಲ್ಲಿ ಹೊಸ ಕಾನೂನು ವರದಿಯನ್ನು ರಾಜ್ಯಪಾಲರಿಗೆ ನೀಡಲಾಗುವುದು. ಪೊಲೀಸರಿಗೆ ಸುಮೋಟೋ ಕೇಸ್ ಹಾಕುವ ಅಧಿಕಾರ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರಧಾನಿ ಅವರಿಗೆ ಪತ್ರ ಬರೆಯಲಿದ್ದಾರೆ. ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ತುಮುಲ್ ಅಧ್ಯಕ್ಷ ಚುನಾವಣೆ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅದರ ಬಗ್ಗೆ ನಾನು ಮಾತಡಲ್ಲ. ನಾಮಿನೇಷನ್ ಮಾಡಿ ಕಾನೂನಿನಲ್ಲಿ ಅವಕಾಶ ಇದೆ ಹಾಗಾಗಿ ಮಾಡಿದ್ದೇವೆ. ತುಘಲಕ್ ದರ್ಬಾರ್ ಅನ್ನೋದು ನನಗೆ ಗೊತ್ತಿಲ್ಲ. ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ನಂತರ ಮಾಧುಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ಹೇಗೆ ಅಂತ ಹೇಳಿ ಅವರೇ ಎಕ್ಸಪ್ಲೆನ್ ಮಾಡಲಿ. ನಾಮಿನೇಷನ್ ಮಾಡಲು ಅವಕಾಶ ಇದೆಯಲ್ವಾ ಅದಕ್ಕೆ ಮಾಡಲಾಗಿದೆ. ಅವರ ಪ್ರಕಾರ ಅವರಿಗೆ ತಿಳಿದ್ದಿದ್ದು ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *