ಬೆಳಗಾವಿ : ಕರ್ನಾಟಕದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಮಕ್ಕಳೇ ಲವ್ ಜಿಹಾದ್‌ಗೆ ತುತ್ತಾಗಿದ್ದಾರೆ. ಆ ಪೊಲೀಸ್ ಅಧಿಕಾರಿಗಳು ನಮ್ಮ ಬಳಿ ಬಳಿ ಸಹಾಯ ಕೇಳಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಪ್ರೇಮಿಗಳ ದಿನದಂದು ಲವ್ ಜಿಹಾದ್ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಲವ್ ಜಿಹಾದ್ ತಡೆಯಲು ಈಗಾಗಲೇ ಸಹಾಯವಾಣಿ ತೆರೆದಿದ್ದೇವೆ. ಲವ್ ಜಿಹಾದ್ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರೇಮಿಗಳ ದಿನದಂದು ಯುವತಿಯರು‌ ತ್ರಿಶೂಲ‌ ಹಾಗೂ ಖಾರದ ಪುಡಿ ಇಟ್ಟುಕೊಂಡು ಓಡಾಡಬೇಕು. ಹಿಂದೂ ಸಮಾಜದ ಹಿತದೃಷ್ಟಿಯಿಂದ ತ್ರಿಶೂಲ ಧಿಕ್ಷೆ ನೀಡಲಾಗಿದೆ. ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ ಎಂದರು.

ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಕೊಲೆ ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಕಾನೂನುಗಳಿಲ್ಲದೆ ಮಹಿಳೆಯರು ಇಂದು ಪರಿಪತಪಿಸುವಂತಾಗಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಶಿಕ್ಷೆ ಆಗಬೇಕಿದೆ ಎಂದು ಆಗ್ರಹಿಸಿದರು.

ಈಗಾಗಲೇ ನಮ್ಮ ಸಹಾಯವಾಣಿಯ ಮೂಲಕ‌ 40% ರಷ್ಟು ಲವ್ ಜಿಹಾದ್ ತಡೆಯಲಾಗಿದೆ. 100 ಕಡೆಗಳಲ್ಲಿ ತ್ರಿಶೂಲ‌ ಧಿಕ್ಷಾ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *