ಪಾಕಿಸ್ತಾನದ ಪಂಚಾಜ್ ಪ್ರಾಂತ್ಯದ ಮಿಯಾನ್ ವಾಲಿ ವಾಯುನೆಲೆ ಉಗ್ರರು ಆತ್ಮಾಹುತಿ ದಳ ದಾಳಿಗೆ ಯತ್ನಿಸಿದ್ದು, ಮೂವರು ಉಗ್ರರನ್ನು ಸದೆಬಡಿಯಲಾಗಿದೆ.
ಅಪಾರ ಪ್ರಮಾಣದ ಶಸ್ತಾಸ್ತ್ರ ಹೊಂದಿದ್ದ 5ರಿಂದ 6 ಜನರಿದ್ದ ಉಗ್ರರ ಗುಂಪು ಶನಿವಾರ ಮುಂಜಾನೆ ವಾಯುಪಡೆಯ ವಾಯುನೆಲೆ ಮೇಲೆ ದಾಳಿ ಮಾಡಿದ್ದಾರೆ. ಆದರೆ ಪಾಕಿಸ್ತಾನದ ಸೇನೆ ಉಗ್ರರು ವಾಯುನೆಲೆಯೊಳಗೆ ಪ್ರವೇಶಿಸುವ ಮುನ್ನವೇ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.
ಮಿಯಾನ್ ವಾಲಿ ತರಬೇತು ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ದಾಳಿಯಲ್ಲಿ ಯಶಸ್ವಿಯಾಗದಂತೆ ಪಾಕಿಸ್ತಾನ ಸೇನೆ ತಡೆದಿದೆ. ಇದರಿಂದ ಹೆಚ್ಚಿನ ಹಾನಿ ಆಗಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.