ಚಿಕ್ಕಬಳ್ಳಾಪುರ: ಕರ್ನಾಟಕ ರೈತ ಜನಸೇನ(ರಿ) ಚಿಕ್ಕಬಳ್ಳಾಪುರ ವತಿಯಿಂದ ಇಂದು ಆಂಧ್ರಪ್ರದೇಶ ಉಪ
ಮುಖ್ಯಮಂತ್ರಿ ಖ್ಯಾತ ನಟ ಪವನ್ ಕಲ್ಯಾಣ ರವರ ಹುಟ್ಟುಹಬ್ಬವನ್ನು ಸಮಾಜ ಸೇವೆ ಕಾರ್ಯ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಬಂದು ರಕ್ತದಾನ ಮಾಡಿದರು ಇನ್ನು ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸೀರೆ ವಿತರಿಸಲಾಯಿತು ಇದಲ್ಲದೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪವನ್ ಕಲ್ಯಾಣ್ ರವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರೈತ ಜನಸೇನ ರಾಜ್ಯದಕ್ಷೆ ಸುಶ್ಮಾ ಶ್ರೀನಿವಾಸ್ ಮಾತನಾಡಿ

ಪವನ್ ಕಲ್ಯಾಣ್ ಅಪರೂಪದ ವ್ಯಕ್ತಿತ್ವ ಹೊಂದಿದ್ದು ಅವರ ಸೇವೆ ಇತರರಿಗೆ ಮಾದರಿ ಸಮಾಜವನ್ನು ತಿದ್ದಲು ಮುಂದೆ ಬಂದಿರುವ ಪವನ್ ಕಲ್ಯಾಣ್ ಅವರಂತಹ ಮನುಷ್ಯ ಸಮಾಜಕ್ಕೆ ಅವಶ್ಯಕತೆ ಇದೆ ಹಾಗಾಗಿ ಅವರ ಹುಟ್ಟು ಹಬ್ಬದಂದು ರಕ್ತದಾನ ಶಿಬಿರ ಅನ್ನಸಂತರ್ಪಣೆ ಜೊತೆಗೆ ಪೌರಕಾರ್ಮಿಕರ ಹೆಣ್ಣು ಮಕ್ಕಳಿಗೆ ಗೌರವ ಪೊರ್ವಕವಾಗಿ ಅರಿಶಿನ ಕುಂಕುಮ ನೀಡಿ ಸೀರೆ ವಿತರಿಸಿದ್ದೇವೆ ಎಂದರು.

ಬೈಟ್: ಸುಶ್ಮಾ ಶ್ರೀನಿವಾಸ್
ಕರ್ನಾಟಕ ರೈತ ಜನಸೇನ ರಾಜ್ಯದಕ್ಷೆ

Leave a Reply

Your email address will not be published. Required fields are marked *