ಮುಂಬೈ : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷದ ಟೆಸ್ಟ್ ತಂಡವನ್ನು ಇಂದು ಪ್ರಕಟಿಸಿದೆ. ಕಳೆದ 8 ಟೆಸ್ಟ್‌ಗಳ ಪೈಕಿ 6 ರಲ್ಲಿ ಸೋತಿದ್ದರೂ, ಮೂವರು ಭಾರತೀಯ ಆಟಗಾರರು ತಾರಾ ಬಳಗದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ನಾಯಕರಾಗಿ ಆಯ್ಕೆಯಾದ ತಂಡದಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸ್ಥಾನ ಸಿಕ್ಕಿದೆ.
11 ಆಟಗಾರರ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ವರು, ಭಾರತದ ಮೂವರು, ನ್ಯೂಜಿಲೆಂಡ್‌ನ ಇಬ್ಬರು ಮತ್ತು ಶ್ರೀಲಂಕಾದ ಒಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (ನಾಯಕ), ಭಾರತದ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಇಂಗ್ಲೆಂಡ್‌ನ ಬೆನ್ ಡಕೆಟ್, ಜೊ ರೂಟ್, ಹ್ಯಾರಿ ಬ್ರೂಕ್, ಜೆಮ್ಮಿ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಮ್ಯಾಟ್ ಹೆನ್ರಿ, ಶ್ರೀಲಂಕಾದ ಕಮಿಂದು ಮೆಂಡೀಸ್ ತಂಡದಲ್ಲಿದ್ದಾರೆ.