ಉತ್ತರಾಖಂಡ : ಪೂಜಾ ಹೆಗ್ಡೆ, ವರುಣ್ ಧವನ್ ಜೊತೆಗಿನ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ವರುಣ್ ಜೊತೆ ಪೂಜಾ ಉತ್ತರಾಖಂಡದ ಋಷಿಕೇಶನಲ್ಲಿ ಗಂಗಾ ಆರತಿ ಮಾಡಿದ್ದಾರೆ. ಈ ಕುರಿತು ನಟಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೊಸ ಸಿನಿಮಾದ ಶೂಟಿಂಗ್‌ಗಾಗಿ ಋಷಿಕೇಶಗೆ ಚಿತ್ರತಂಡ ತೆರಳಿದೆ. ಈ ವೇಳೆ, ಋಷಿಕೇಶನಲ್ಲಿರುವ ಗಂಗಾ ನದಿಯ ಬಳಿ ವರುಣ್ ಮತ್ತು ಪೂಜಾ ಗಂಗಾ ಆರತಿ ಮಾಡಿ ಪ್ರಾರ್ಥನೆ ಮಾಡುತ್ತಾರೆ. ಸಿನಿಮಾ ಯಶಸ್ಸಿಗಾಗಿ ಸಲ್ಲಿಸಿದ್ದಾರೆ. ಈ ಮೂಲಕ ಸಿನಿಮಾಕ್ಕೆ ಚಿತ್ರತಂಡ ಚಾಲನೆ ನೀಡಿದೆ.

ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿದ್ದಾರೆ. ತೆಗೆದುಕೊಳ್ಳುವ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.

ಈ ಮುನ್ನ ವರುಣ್ ಅವರು ಕೀರ್ತಿ ಸುರೇಶ್ ಜೊತೆ ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿದರು. ಇತ್ತ ಪೂಜಾ ಅವರು ಶಾಹಿದ್ ಕಪೂರ್‌ಗೆ ನಾಯಕಿಯಾಗಿ ‘ದೇವ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *