ಚಿಕ್ಕಬಳ್ಳಾಪುರ ಎಂದರೆ ಶಾಂತಿಯ ಸಂಕೇತನೆ ಅಂತ ಕರೆಯಬಹುದು, ಆದರೆ ನಗರಸಭೆ ಅಧ್ಯಕ್ಷ & ಉಪಾಧ್ಯಕ್ಷ ಚುನಾವಣೆ ಮುಗಿದ ಬಳಿಕ ಚಿಕ್ಕಬಳ್ಳಾಪುರ ಅಂದರೆ ಸಾಕು ಸಂಸದ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನೆನಪಾಗುತ್ತಾರೆ, ನಗರಸಭೆ ಚುನಾವಣೆ ಬಳಿಕ ಡಾ.ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ವಾಕ್ ಸಮರ ಗಗನಕೇರಿತ್ತು.
ಆದರೆ ಇಂದು ಅವರ ಇಬ್ಬರು ಬೆಂಬಲಿಗರಿಂದ ಸುದ್ದಿಗೋಷ್ಠಿಯ ಮುಖಾಂತರ ವಾಕ್ ಸಮರಗಳು ಹೆಚ್ಚಾಗಿದೆ, ಇಂದು ನಗರದ ಪತ್ರಕರ್ತರ ಭವನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಿಂದ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ ಕೆ ಸುಧಾಕರ್ ಬೆಂಬಲಗಿರಿ ವಿರುದ್ಧ ಗುಡುಗಿದ್ದಾರೆ, ಅಖಿಲ ಕರ್ನಾಟಕ ಪ್ರದೀಪ್ ಈಶ್ವರ್ ರಾಜ್ಯಾಧ್ಯಕ್ಷ ನಂದ ಮಾತನಾಡಿ ನಮ್ಮ ಶಾಸಕ ಪ್ರದೀಪ್ ಈಶ್ವರ ಮೇಲೆ ಇಲ್ಲಸಲ್ಲದ ಆರೋಪಗಳು ಮಾಡುತ್ತಿದ್ದಾರೆ, ಅವರು ಬೆಳೆಯುವುದನ್ನು ಸಹಿಸಲಾಗದೆ ಹತಾಶೆಯಲ್ಲಿ ನಾಲಿಗೆ ಹರಿದು ಬಿಡುತ್ತಿದ್ದಾರೆ,
ಅವರು ಶಾಸಕರಾಗಿ 1 ವರ್ಷ4 ತಿಂಗಳು ಕಳೆದಿದೆ, ಅವರ ತಪ್ಪು ಏನಾದ್ರೂ ಸಿಗುತ್ತಾ ಅಂತ ಸುಧಾಕರ್ ಬೆಂಬಲಿತರು ತಾಳ್ಮೆಯಿಂದ ಇದ್ದರೂ ಸಹ ಪ್ರದೀಪ್ ಈಶ್ವರ ಅವರು ಯಾವುದೇ ತಪ್ಪು ಮಾಡಲ್ಲ, ಪ್ರದೀಪ್ ಈಶ್ವರ ಅವರು ತಂದೆ ಎಂಬ ಪದವನ್ನು ಬಳ ಬಳಕೆ ಮಾಡಿದ್ದಾರೆ ಅದು ದೊಡ್ಡ ಅಪರಾಧವಲ್ಲ, ಈ ಸುಧಾಕರ್ ಬೆಂಬಲಿಗರು ಅದನ್ನೇ ದೊಡ್ಡ ತಪ್ಪು ಎಂದು ನಮ್ಮ ಶಾಸಕ ಪ್ರದೀಪೀಸ್ವರ್ ಮೇಲೆ ಇಲ್ಲಸಲ್ಲದ ಆರೋಪಗಳು ಮಾಡುತ್ತಿರುವುದು ಸಮಂಜಸವಲ್ಲ ಎಂದು ನಾನು ತಿಳಿಸುತ್ತೇನೆ, ಇನ್ನು ಏನೇ ಆಗಲಿ ಶಾಸಕ ಪ್ರದೀಪ್ ಈಶ್ವರ ಅವರ ಮೇಲೆ ಮಾತನಾಡಬೇಕಾದರೆ ಮಾತಿನ ಮೇಲೆ ಹಿಡಿತ ವಿದ್ದು ಮಾತನಾಡಬೇಕು ಇಲ್ಲವಾದರೆ ಅವರಿಗೆ ತಕ್ಕ ಉತ್ತರ ನಮ್ಮಿಂದ ನೀಡಲಾಗುವುದು.