ಬೆಂಗಳೂರು : ಹಾಲಿನ ದರ ಏರಿಕೆ ಭೀತಿ ನಡುವೆ, ಸಾಮಾನ್ಯ ಜನರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದೆ. ಇಷ್ಟು ದಿನ ಪ್ರತಿ ಲೀಟರ್, ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ಬರುತ್ತಿದ್ದ, ಹೆಚ್ಚುವರಿ ಹಾಲಿಗೂ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ಏರಿಕೆ ದರ ಶಾಕ್ ಎದುರಾಗುವ ಬಗ್ಗೆ ಸರ್ಕಾರವೇ ಸುಳಿವು ನೀಡಿದೆ. ಈ ಮಧ್ಯೆ ಕಳೆದ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ಮಾಡಿದ್ದು, ಇದರ ಜೊತೆಗೆ ಹೆಚ್ಚುವರಿ ಹಾಲಿಗೆ ನೀಡುತ್ತಿರುವ ಹಣಕ್ಕೆ ಹೆಚ್ಚುವರಿ ದರ ಏರಿಕೆ ಮಾಡಿ, ಹಾಲನ್ನು ಕಡಿತಗೊಳಿಸುವ ಬಗ್ಗೆ ಕೆಎಂಎಫ್ ಚಿಂತನೆಗೆ ಮುಂದಾಗಿದೆ.

ಐದಾರು ತಿಂಗಳ ಹಿಂದೆ ಪ್ರತಿನಿತ್ಯ ಒಂದು ಕೋಟಿ ಸಮೀಪ ಹಾಲು ಉತ್ಪಾದನೆಯಾಗುತ್ತಿದ್ದ, ಕಾರಣ ಹಾಲನ್ನ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್‌ಗಳಲ್ಲಿ ಕ್ರಮವಾಗಿ 50 ಎಂಎಲ್, ಮತ್ತು 100 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ, ಹೆಚ್ಚುವರಿಯಾಗಿ ದರ ಪರಿಷ್ಕರಣೆ ಮಾಡಿದ್ದರು. ಆದರೆ ಬೇಸಿಗೆ ಕಾರಣ ಹಿಂದೆ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಉತ್ಪಾದನೆ ಕಷ್ಟವಾಗಲಿದೆ.

ಸುಮಾರು 10 ರಿಂದ 15%ನಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನ ಕಡಿತ ಮಾಡುವ ಸಾಧ್ಯತೆ ಇದೆ. ಆದರೆ ಹಾಲು ಕಡಿತ ಆದರೂ ಹೆಚ್ಚುವರಿ ಹಾಲಿಗೆ ಪಡೆಯುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ದರ ಏರಿಕೆಗೆ ಚಿಂತನೆ ಮಾಡಿರುವ ಸರ್ಕಾರ, ಹೆಚ್ಚುವರಿ ಹಾಲು ಕಡಿತವಾದರೂ ಅದೇ ದರಕ್ಕೆ ಮತ್ತೆ ಹೊಸ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡಲು ಕೆಎಂಎಫ್ ನಿರ್ಧಾರ ಮಾಡಿದ್ದು, ದರ ಏರಿಕೆಗೂ ಮುನ್ನವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *