ಬೆಂಗಳೂರು : ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ‘ಪುತ್ರರತ್ನ’ ಬಸವೇಶ್ ನಿನ್ನೆ ಭದ್ರಾವತಿಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಾಡಿರುವ ಸಂಗತಿ ಕನ್ನಡಿಗರಿಗೆಲ್ಲ ಗೊತ್ತಿದೆ.
ಒಂದು ಸುಸಂಸ್ಕೃತ ಕುಟುಂಬ ಯೋಚಿಸಲೂ ಸಾಧ್ಯವಿಲ್ಲದಂಥ ಕೆಟ್ಟ ಪದಗಳನ್ನು ಬಸವೇಶ್ ಅಧಿಕಾರಿಯ ವಿರುದ್ಧ ಬಳಸಿದ್ದಾನೆ. ಅವನು ಬಳಸಿದ ಭಾಷೆ ಮತ್ತು ಅಧಿಕಾರಿಯೊಂದಿಗೆ ನಡೆದುಕೊಂಡಿರುವ ರೀತಿಯನ್ನು ಸಹಕಾರ ಸಚಿವ ಕೆಎನ್ ರಾಜಣ್ಣ ತೀವ್ರವಾಗಿ ಖಂಡಿಸಿದ್ದಾರೆ.
ಶಾಸಕನ ಮಗನಾಗಲೀ ಆಥವಾ ಮಂತ್ರಿಯ ಮಗ, ಹಾಗೆ ಮಾತಾಡಕೂಡದು, ಬಸವೇಶ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಹೇಳಿದರು.