ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮೆಪ್ಪಾಡಿ ಬಳಿಯ ಹಲವಾರು ಗುಡ್ಡ ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು 100ಕ್ಕೂ ಹೆಚ್ಚು ಜನ ಗುಡ್ಡ ಮಣ್ಣಿನಲ್ಲಿ ಸಿಲುಕಿದ್ದಾರೆ ಎಂದು ಶಂಕೆ ವ್ಯಕ್ತಪಡೆಸಲಾಗಿದೆ .ವರದಿಗಳ ಪ್ರಕಾರ, 10 ಮನೆಗಳಿದ್ದ ಜಾಗ ಅದು , ಮೂರು ಗುಡ್ದಗಳಿಂದ ನುಗ್ಗಿದ ಸುನಾಮಿಯಿಂದಾಗಿ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ 300 ಕ್ಕೂ ಹೆಚ್ಚು ಕುಟುಂಬಗಳು ನಾಪತ್ತೆ ಎಂದು ಹೇಳಲಾಗ್ತಿದೆ. ಮೊದಲ ಭೂಕುಸಿತವು ಬೃಹತ್ತಾಕಾರದ ಬಂಡೆಗಳಿಂದ ಸುಮಾರು 2 ಗಂಟೆಗೆಯ ಸಮಯದಲ್ಲಿ ಪ್ರದೇಶಕ್ಕೆ ಅಪ್ಪಳಿಸಿತು.

ನಂತರದ ಮಾಹಿತಿಯ ಪ್ರಕಾರ, ಮುಂಜಾನೆ 4.10 ರ ಸರಿ ಸುಮಾರಿಗೆ ಮತ್ತೊಂದು ಭೂಕುಸಿತ ಸಂಭವಿಸಿದೆ ಆನಂತರ ಅಗ್ನಿಶಾಮಕ ಮತ್ತು ಎನ್ನಿಆರ್‌ಎಫ್ ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸಿಎಂಎ) ತಿಳಿಸಿದೆ. ಹೆಚ್ಚುವರಿಯಾಗಿ, ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ವಯನಾಡೆ ತೆರಳಲು ಸೂಚನೆ ನೀಡಲಾಗಿದೆ ಎಂದು ಕೆಎಸ್ಕಿ ಎಂಎ ಫೇಸ್ಪುಕ್ ಪೋಸ್ಟಲ್ಲಿ ತಿಳಿಸಿದೆ

Leave a Reply

Your email address will not be published. Required fields are marked *