ಬಿರು ಬೇಸಿಗೆಯಲ್ಲಿ ರಾಜ್ಯದ ವಿವಿಧೆಡೆ ವರ್ಷಧಾರೆಯಾಗಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸುಮಾರು 10 ನಿಮಿಷಗಳ ಕಾಲ ಮಳೆಯಾಗಿದ್ದು, ಜನರು ಹರ್ಷಗೊಂಡಿದ್ದಾರೆ.
ಇತ್ತ ಹೊಸಪೇಟೆಯಲ್ಲೂ ಮೇಘರಾಜ ತಂಪು ಸೂಸಿದ್ದಾನೆ. ವರ್ಷದ ಮೊದಲ ಮಳೆಯಲ್ಲಿ ಮಕ್ಕಳು ಖುಷಿಯಿಂದ ಆಟವಾಡಿದ್ದಾರೆ. ಹಾವೇರಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರವಾಗಿದೆ. ಬಾಲಕರ ಹಾಸ್ಟೆಲ್‌ಗೆ ನೀರು ನುಗ್ಗಿದೆ. ವಿದ್ಯಾರ್ಥಿಗಳ ಹಾಸಿಗೆಗಳು ತೊಪ್ಪೆಯಾಗಿವೆ. ದಾವಣಗೆರೆ, ಬಾಗಲಕೋಟೆಯಲ್ಲೂ ಕೆಲವೆಡೆ ತುಂತುರು ಮಳೆಯಾಗಿದೆ.
ದಾವಣಗೆರೆಯಲ್ಲಿ ವರ್ಷಧಾರೆಯಾಗಿದ್ದು, ತುಂತುರು ಮಳೆಯಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಜಿಲ್ಲೆಯ ಹೆಬ್ಬಾಳು, ಅನಗೋಡು ಸೇರಿದಂತೆ ಹಲವು ಕಡೆ ಮಳೆಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಂತಾಗಿದೆ.