ನಟ ‘ರಾಕಿಂಗ್ ಸ್ಟಾರ್’ ಯಶ್ ಅವರು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಇಷ್ಟು ತಿಂಗಳಾದ ನಂತರದಲ್ಲಿ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ಯಶ್ ಹೇಳಿಲ್ಲ. ಈಗ ಬಾಲಿವುಡ್‌ನಲ್ಲಿ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ನಿಜಾನಾ?

rocking star yash

ಹೈಲೈಟ್ಸ್‌:

  • ‘ಕೆಜಿಎಫ್ 2’ ನಂತರ ಸಿನಿಮಾ ಘೋಷಣೆ ಮಾಡದ ‘ರಾಕಿಂಗ್ ಸ್ಟಾರ್’ ಯಶ್
  • ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡ್ತಾರಾ?
  • ಬಾಲಿವುಡ್‌ನಿಂದ ಯಶ್ ಅವರನ್ನು ಹುಡುಕಿಕೊಂಡು ಬರುತ್ತಿರುವ ಭರ್ಜರಿ ಆಫರ್‌ಗಳು

‘ರಾಕಿಂಗ್ ಸ್ಟಾರ್’ ಯಶ್ ಅವರ ( Rocking Star Yash ) ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ‘ಕೆಜಿಎಫ್ 2’ ಸಿನಿಮಾ ತೆರೆ ಕಂಡು ಇಷ್ಟು ತಿಂಗಳುಗಳು ಕಳೆದರೂ ಕೂಡ ಯಶ್ ಅವರು, ಇನ್ನು ಮುಂದಿನ ಪ್ರಾಜೆಕ್ಟ್ ಬಗ್ಗೆ ಉತ್ತರ ನೀಡಿಲ್ಲ.

ನಿರ್ದೇಶಕ ನಿತೇಶ್ ತಿವಾರಿ ಅವರು ಪೌರಾಣಿಕ ‘ರಾಮಾಯಣ’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗ ‘ಕೆಜಿಎಫ್’ ನಟ ಯಶ್ ಅವರು ಈ ಚಿತ್ರತಂಡಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ಯಶ್‌ ಅವರ ಜತೆ ಚಿತ್ರತಂಡ ಚರ್ಚೆ ಮಾಡಿದೆ. ಯಶ್ ಒಪ್ಪಿದರೆ, ಇದು ಬಾಲಿವುಡ್‌ನಲ್ಲಿ ಅವರ ಮೊದಲ ಸಿನಿಮಾ ಎನಿಸಿಕೊಳ್ಳುತ್ತದೆ. ‘ರಾಮಾಯಣ’ ಬಗ್ಗೆ ಯಶ್ ಅವರು ಉತ್ತರ ನೀಡಬೇಕಿದೆ.

ರಣಬೀರ್ ಕಪೂರ್ ಅವರಿಗೆ ರಾಮನ ಪಾತ್ರ ಮಾಡಿಸಬೇಕು ಎಂದು ನಿತೇಶ್ ಅಂದುಕೊಂಡಿದ್ದಾರೆ. ಇನ್ನು ರಣಬೀರ್ ಕಪೂರ್‌ಗೂ ಕೂಡ ಇದರಲ್ಲಿ ಆಸಕ್ತಿ ಇದ್ದು, ಮುಂದಿನ ದಿನಗಳಲ್ಲಿ ಒಪ್ಪಿಗೆ ಸೂಚಿಸಬಹುದು ಎನ್ನಲಾಗಿದೆ. ಎಲ್ಲವೂ ಪರ್ಫೆಕ್ಟ್ ಆಗಬೇಕು, ಸಿನಿಮಾ ತಂಡದಲ್ಲಿ ಬದಲಾವಣೆಯಾದರೆ ಕಷ್ಟ ಎಂದು ರಣಬೀರ್ ಅಂದುಕೊಂಡಿದ್ದಾರಂತೆ. ಈ ಸಿನಿಮಾ 2019ರಿಂದಲೂ ಚರ್ಚೆಯಾಗುತ್ತಿದೆ. ಅಂದಹಾಗೆ ಇತ್ತೀಚೆಗೆ ಆಲಿಯಾ ಭಟ್, ರಣಬೀರ್ ಕಪೂರ್ ಅವರು ಪದೇ ಪದೇ ನಿತೇಶ್ ಆಫೀಸ್‌ಗೆ ಹೋಗಿ ಬರುತ್ತಿರೋದರಿಂದ ಆದಷ್ಟು ಬೇಗ ರಾಮಾಯಣದ ಬಗ್ಗೆ ಅಪ್‌ಡೇಟ್ ಸಿಗಲಿದೆ ಎನ್ನಲಾಗುತ್ತಿದೆ.

ಯಶ್ ಅವರು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದಾರಂತೆ. ಇನ್ನು ಸ್ಕ್ರಿಪ್ಟ್ ಕೇಳುತ್ತಿರುವ ಅವರು ಯಾವಾಗ ಫೈನಲ್ ಮಾಡಿಕೊಂಡು, ಸಂಪೂರ್ಣ ತಯಾರಿಯೊಂದಿಗೆ ವೀಕ್ಷಕರ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಇನ್ನು ‘ಕೆಜಿಎಫ್ 3’ ಬಗ್ಗೆಯೂ ಚರ್ಚೆ ಆಗುತ್ತಿದೆ.

“ನಾನು ವೀಕ್ಷಕರಿಗೆ ಇಷ್ಟವಾಗುವ ಹಾಗೆ ಸಿನಿಮಾ ಮಾಡಬೇಕು. ಗಡಿಬಿಡಿಯಿಂದ ಏನೂ ಆಗಲ್ಲ. ಹೀಗಾಗಿ ಸಮಯ ತೆಗೆದುಕೊಂಡು ಸಿನಿಮಾ ಘೋಷಣೆ ಮಾಡ್ತೀನಿ, ಹುಟ್ಟುಹಬ್ಬದ ದಿನ ಸಿನಿಮಾ ಬಗ್ಗೆ ಹೇಳ್ತೀನಿ ಅಂತ ಅಂದುಕೊಳ್ಳಬೇಡಿ” ಎಂದು ಯಶ್ ಅವರು ಹೇಳಿದ್ದಾರೆ.

ಇನ್ನು ಯಶ್ ಅವರು ‘ಕೆಜಿಎಫ್ 2’ ರಿಲೀಸ್ ಆದ ನಂತರ ಪ್ರಶಸ್ತಿ ಸಮಾರಂಭ, ಮದುವೆ, ಸಮಾರಂಭಗಳಿಗೆ ಹಾಜರಿ ಹಾಕಿರುವ ಯಶ್ ಅವರು ಕೆಲವೇ ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.

ಅಂದಹಾಗೆ ಮಕ್ಕಳಾದ ಆಯ್ರಾ, ಯಥರ್ವ್ ಅವರ ಜೊತೆ ಯಶ್ ಹೆಚ್ಚು ಸಮಯ ಕಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *