ಸಿನಿಮಾಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಎಲ್ಲರನ್ನೂ ರಂಜಿಸುತ್ತಿರುವ, ತಮ್ಮ ಸ್ಪೀಡ್​ನಿಂದಾಗಿ ಕಡಿಮೆ ಸಮಯದಲ್ಲಿಯೇ ಟಾಲಿವುಡ್, ಬಾಲಿವುಡ್​ನ ಬೇಡಿಕೆಯ ನಟಿ, ನಂಬರ್ 1 ಎಂದೆಲ್ಲ ಕರೆಸಿಕೊಂಡಿರುವ ರಶ್ಮಿಕಾಗೆ ಈಗ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ರಶ್ಮಿಕಾ ಮಂದಣ್ಣ ಏರ್​ಪೋರ್ಟ್​ನಲ್ಲಿ ಸಿಬ್ಬಂದಿಯ ಸಹಾಯದಿಂದ ಕುಂಟುಂತಾ ನಡೆಯುತ್ತಿರುವುದು ನಂತರ ವ್ಹೀಲ್​ಚೇರ್​ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿದ್ದು, ನಟಿಯ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.

ಅಸಲಿಗೆ ರಶ್ಮಿಕಾಗೆ ಕೆಲವು ದಿನಗಳ ಹಿಂದೆ ಕಾಲಿಗೆ ಪೆಟ್ಟಾಗಿದೆ. ಜಿಮ್ ಮಾಡುವ ಸಮಯದಲ್ಲಿ ತಾವೇ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ವ್ಯಾಯಾಮ ಮಾಡುವ ಸಮಯದಲ್ಲಿ ಆದ ಗಾಯದಿಂದ ರಶ್ಮಿಕಾರ ಕಾಲಿನ ಮೂಳೆಯಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯನ್ನೂ ಸಹ ರಶ್ಮಿಕಾ ಪಡೆಯುತ್ತಿದ್ದಾರೆ. ವಾರದ ಹಿಂದೆ, ಪ್ಲಾಸ್ಟರ್ ಹಾಕಿದ ತಮ್ಮ ಕಾಲಿನ ಚಿತ್ರವನ್ನು ಸಹ ರಶ್ಮಿಕಾ ಹಂಚಿಕೊಂಡಿದ್ದರು.

ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಕುಟುಂತ್ತಾ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ನಡೆಯಲು ಕಷ್ಟಪಡುತ್ತಿರುವ ಕಾರಣ ವ್ಹೀಲ್​ಚೇರ್​ನ ಸಹಾಯವನ್ನು ರಶ್ಮಿಕಾ ಪಡೆದಿದ್ದಾರೆ. ಕಾಲು ನೋವಿನ ನಡೆಯುವೆಯೂ ಸಹ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಇಂದು ಬೆಳಿಗ್ಗೆ ಅವರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗಿದ್ದು, ಅಲ್ಲಿ ಅವರ ನಟನೆಯ ಹಿಂದಿ ಸಿನಿಮಾ ‘ಛಾವಾ’ದ ಡಬ್ಬಿಂಗ್ ಮತ್ತು ಪ್ಯಾಚ್ ವರ್ಕ್ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *