ʼಅನಿಮಲ್’, ‘ಪುಷ್ಪ 2’ ಯಶಸ್ಸಿನ ಬಳಿಕ ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದುವ ಬಗ್ಗೆ ನಟಿ ಮಾತನಾಡಿದ್ದಾರೆ. ಟಾಪ್‌ ನಟಿ ಹ್ಯಾಪಿ ಟು ರಿಟೈರ್ ಎಂದಿರೋದು ಸಹಜವಾಗಿ ರಶ್ಮಿಕಾ ಫ್ಯಾನ್ಸ್‌ಗೆ ಶಾಕ್ ಆಗಿದೆ.

ಇತ್ತೀಚೆಗೆ ಜಿಮ್ ಮಾಡುವಾಗ ನಟಿಯ ಕಾಲಿಗೆ ಪೆಟ್ಟಾಗಿದ್ದರೂ ಲೆಕ್ಕಿಸದೇ ‘ಛಾವಾ’ ಚಿತ್ರದ ಟ್ರೈಲರ್ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈವೆಂಟ್‌ನಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಶ್ಮಿಕಾ, ಇದು ಒಂದು ಗೌರವ. ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ದಕ್ಷಿಣದಿಂದ ಬಂದ ಹುಡುಗಿಯಾಗಿ ನಾನು ಈ ಜೀವಿತಾವಧಿಯಲ್ಲಿ ಕೇಳಬಹುದಾದ ಅತ್ಯಂತ ವಿಶೇಷ ಮತ್ತು ವಿಭಿನ್ನವಾದ ಪಾತ್ರವಾಗಿದೆ.

ಇದಾದ ನಂತರ, ನಾನು ನಿವೃತ್ತಿ ಹೊಂದಿದರೂ ಬೇಸರವಿಲ್ಲ ಎಂದಿದ್ದಾರೆ. ನಾನು ಸಾಮಾನ್ಯವಾಗಿ ಅಳುವುದಿಲ್ಲ. ಆದರೆ ಈ ಟ್ರೈಲರ್ ನನ್ನನ್ನು ಕಣ್ಣೀರಾಗಿಸಿದೆ. ಯೇಸುಬಾಯಿ ಪಾತ್ರ ನನ್ನ ಪಾಲಿಗೆ ವಿಶೇಷವಾಗಿದೆ. ಈ ಸಿನಿಮಾದ ನಂತರ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ನಿರ್ದೇಶಕ ಲಕ್ಷ್ಮಣ್‌ಗೆ ಹೇಳಿದ್ದೇನೆ ಎಂದು ವೇದಿಕೆಯಲ್ಲಿ ನಟಿ ಹಂಚಿಕೊಂಡಿದ್ದಾರೆ. ಈ ಪಾತ್ರಕ್ಕೆ ಸೆಲೆಕ್ಟ್ ಮಾಡಿದ ಚಿತ್ರತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ.

ರಶ್ಮಿಕಾಗೆ ಇನ್ನೂ 28 ವರ್ಷ. ವೃತ್ತಿರಂಗದಲ್ಲಿ ಟಾಪ್ 1 ನಟಿಯಾಗಿ ಬೇಡಿಕೆಯಿದೆ. ಹೀಗಿರುವಾಗ ನಟಿ ನಿವೃತ್ತಿ ಬಗ್ಗೆ ಮಾತನಾಡಿರೋದು ನಟಿಯ ಫ್ಯಾನ್ಸ್‌ಗೆ ಬೇಸರವಾಗಿದೆ. ಸದ್ಯ ಬಿಗ್ ಬಜೆಟ್ ಸಿನಿಮಾಗಳು ಅವರ ಕೈಯಲ್ಲಿರುವ ಕಾರಣ, ಮುಂದಿನ ವರ್ಷಗಳಲ್ಲಿ ವಿವಾಹದ ಬಳಿಕ ಅವರು ನಟನೆಯಿಂದ ದೂರವಿರಬಹುದು.

Leave a Reply

Your email address will not be published. Required fields are marked *