ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳ ಇಂದು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದೆ. ಮುಂಜಾನೆ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಕರೆದುಕೊಂಡ ಬಂದ ಎನ್‌ಐಎ ತಂಡ, ಸ್ಥಳ ಮಹಜರು ಪ್ರಕ್ರಿಯೆ ನಡೆಸಿದೆ. ಸ್ಥಳೀಯ ಪೊಲೀಸರ ಭದ್ರತೆಯ ನಡುವೆ ಆರೋಪಿಗಳನ್ನು ಕರೆತಂದು , ಎನ್‌ಐಎ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದು, NIA ಸ್ಥಳ ಮಹಜರ್ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆಗೆ ಭದ್ರತೆ ಒದಗಿಸಲಾಗಿದ್ದು, ವೈಟ್ ಫೀಲ್ಡ್ ವಿಭಾಗದ 50ಕ್ಕೂ ಪೊಲೀಸರ ನಿಯೋಜನೆಯೊಂದಿಗೆ ಕೆಫೆಯ ಹೊರಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ತಪಾಸಣೆ ನಡೆಸಲಾಗಿದೆ..

ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ IED ಬಾಂಬ್‌ ಸ್ಫೋಟ ನಡೆದಿತ್ತು. ಹಲವು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ ಬಳಿಕ, ಎನ್‌ಐಎ ಶಂಕಿತ ಉಗ್ರರ ಬಂಧಿಸಿ ವಿಚಾರಣೆ ಮಾಡಿತ್ತು. ಆದಾದ ನಂತರ ತನಿಖೆ ಮುಂದಿವರೆಸಿ ಏಪ್ರಿಲ್ 12ರಂದು ಕೋಲ್ಕತ್ತಾದಲ್ಲಿ ಪ್ರಮುಖ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು NIA ಬಂಧಿಸಿತ್ತು.

ಒಟ್ನಲ್ಲಿ ಇನ್ನು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ದೃಶ್ಯವನ್ನು ಎನ್ ಐಎ ಅಧಿಕಾರಿಗಳು ಮರುಸೃಷ್ಟಿಸಿದ್ದಾರೆ, ಆರೋಪಿ ಮುಸಾವಿರ್ ಕೆಫೆಗೆ ಹೇಗೆ ಬಂದಿದ್ದ? ಕೆಫೆಯಲ್ಲಿ ಕನ್ನಡಕ, ಟೋಪಿ ಹಾಕಿಕೊಂಡು ಬಾಂಬ್ ಎಲ್ಲಿ ಇಟ್ಟು ಹೋಗಿದ್ದ ಎಂಬುದರ ಕುರಿತು ದೃಶ್ಯವನ್ನು ಮರುಸೃಷ್ಟಿಸಲಾಗಿದೆ.

Leave a Reply

Your email address will not be published. Required fields are marked *