ಅರಣ್ಯ ಪ್ರದೇಶದಲ್ಲಿ ಕಾಂತಾರ 2 ಚಿತ್ರ ತಂಡ ಮರಗಳನ್ನು ಕಡಿದಿದೆ ಎಂಬ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ. ಆರೋಪಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಎಸಿಎಫ್ ಹಾಗೂ ಯಸಳೂರು ಆರ್‍ಎಫ್‍ಓ ಚಿತ್ರೀಕರಣದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದೆ.

ಚಿತ್ರೀಕರಣದ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಯಾವುದೇ ಸ್ಫೋಟ ಮಾಡಿಲ್ಲ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಚಿತ್ರೀಕರಣದ ವೇಳೆ ಸ್ಫೋಟ ಮಾಡಲಾಗಿದೆ.

ಮರ ಕಡಿಯಲಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದರು. ಮರದ ಬಣ್ಣ ಬಳಿದ ಕೃತಕ ಮರಗಳನ್ನು ಚಿತ್ರೀಕರಣಕ್ಕೆ ಬಳಕೆ ಮಾಡಲಾಗಿದೆ. ಚಿತ್ರೀಕರಣದಿಂದ ಅರಣ್ಯ ಹಾಗೂ ಮರಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *