ಖಾಸಗಿ ಸೇನೆ ವ್ಯಾಗ್ನರ್ ಗ್ರೂಪ್ ಬಂಡಾಯದ ಘೋಷಣೆಯ ಬಳಿಕ ರಷ್ಯಾ(Russia)ದಲ್ಲಿ ತೀವ್ರ ಕೋಲಾಹಲ ಉಂಟಾಗಿತ್ತು. ವ್ಯಾಗ್ನರ್ ಗ್ರೂಪ್ ಬಂಡಾಯವೆದ್ದು 12 ಗಂಟೆಗಳ ಒಳಗಾಗಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಖಾಸಗಿ ಸೇನೆ ವ್ಯಾಗ್ನರ್ ಗ್ರೂಪ್ ಬಂಡಾಯದ ಘೋಷಣೆಯ ಬಳಿಕ(Russia)ದಲ್ಲಿ ತೀವ್ರ ಕೋಲಾಹಲ ಉಂಟಾಗಿತ್ತು. ವ್ಯಾಗ್ನರ್ ಗ್ರೂಪ್ ಬಂಡಾಯವೆದ್ದು 12 ಗಂಟೆಗಳ ಒಳಗಾಗಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆಪ್ತರಾಗಿದ್ದ ಯೆಗ್ವೆನಿ ಪ್ರಿಗೋಷಿನ್, ಪುಟಿನ್ ಬೆಂಬಲದಿಂದಲೇ 2014ರಲ್ಲಿ ವ್ಯಾಗ್ನರ್ ಎಂಬ ಮಿಲಿಟರಿ ಪಡೆ ಕಟ್ಟಿದ್ದರು. ಸೇಂಟ್ ಪೀಟರ್ಸ್​ಬರ್ಗ್​ ಮೇಯರ್ ಆಗಿಯೂ ಕೆಲಸ ನಿರ್ವಹಿಸಿದ್ದರು.

ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ವ್ಯಾಗ್ನರ್ ಗುಂಪು ಮಹತ್ವದ ಪಾತ್ರವಹಿಸಿತ್ತು, ಹಾಗೆಯೇ ಬಖ್ಮಟ್ ನಗರವನ್ನು ವಶಪಡಿಸಿಕೊಳ್ಳುವ ಸಲುವಾಗಿ ನಡೆದ ಯುದ್ಧದಲ್ಲಿ ರಷ್ಯಾ ಪಡೆಗಳು ಯಶ್ವಿಯಾಗುವಲ್ಲಿ ವ್ಯಾಗ್ನರ್ ಪಾತ್ರ ಹೆಚ್ಚಿತ್ತು.

ಸರ್ಕಾರ ಹಾಗೂ ಸೇನೆಯ ವಿರುದ್ಧ ಬಂಡಾಯವೆದ್ದಿರುವ ಪ್ರಿಗೋಷಿಸ್ ವಿರುದ್ಧ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮಿತಿ ಕಿಡಿಕಾರಿತ್ತು, ಸಶಸ್ತ್ರ ದಂಗೆ ನಡೆಸುವವರಿಗೆ 20 ವರ್ಷಗಳಷ್ಟು ಜೈಲು ಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಸಿತ್ತು.

ಉಕ್ರೇನ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ರಷ್ಯಾ ಸೇನೆಯ ಅಧಿಕಾರಿಗಳು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಒದಿಸುತ್ತಿಲ್ಲ ಎಂದು ಆರೋಪಿಸಲಾಗಿತ್ತು ಇದರ ಬೆನ್ನಲ್ಲೇ ಬಂಡಾಯವೆದ್ದಿತ್ತು. ರಷ್ಯಾ ಸೇನೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವಾಲಯದ ಜತೆಗಿನ ಮುಸುಕಿನ ಗುದ್ದಾಟ ಈಗ ದಂಗೆ ರೂಪ ತಳೆದಿದೆ ಎಂದುಋಉ ಹೇಳಲಾಗಿದೆ.

ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗುಂಪಿನ ಮುಖ್ಯಸ್ಥರ ಮೇಲೆ ಸಶಸ್ತ್ರ ದಂಗೆಯ ಆರೋಪವನ್ನು ಹೊರಿಸಿದೆ. ಅಷ್ಟೇ ಅಲ್ಲದೆ, ಪ್ರಿಗೋಜಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *