ಬೆಂಗಳೂರು : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಾಧುಕೋಕಿಲ ನನಗೆ ಆಹ್ವಾನ ನೀಡಿಲ್ಲ ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಹ್ವಾನದ ಕುರಿತು ಮಾತನಾಡಿದ ಅವರು, ಚಲನಚಿತ್ರೋತ್ಸವಕ್ಕೆ ಆಹ್ವಾನ ಸರಿಯಾಗಿ ಬಂದಿಲ್ಲ. ಕಲಾವಿದರು ಯಾರು ಬರಬೇಕಿತ್ತು? ಸರಿಯಾಗಿ ಆಹ್ವಾನ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.

ನನ್ನನ್ನು ಚಲನಚಿತ್ರೋತ್ಸವಕ್ಕೆ ಕರೆದಿಲ್ಲ. ಪಾಸ್ ಕೂಡ ನೀಡಿಲ್ಲ. ಸಾಧುಕೋಕಿಲ ಅವರನ್ನೇ ಕೇಳಿ ಎಂದು ಹೇಳುತ್ತಾರೆ. ಯಾರ ಹತ್ತಿರ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಸಾಧುಕೋಕಿಲ ಅವರು ಸಭೆ ಕರೆಯಬೇಕಿತ್ತು.

ನಿಗಮಮಂಡಳಿ ಅಧ್ಯಕ್ಷ ಸಭೆ ನಡೆಸಬೇಕಿತ್ತು. ನನ್ನ ಜೊತೆಯೇ ಅವರು ಸರಿಯಾಗಿ ಮಾತನಾಡಲ್ಲ. ಆಹ್ವಾಸ ಸಹ ಕೊಟ್ಟಿಲ್ಲ. ಸಾಧುಕೋಕಿಲ ಫೋನ್ ನಂಬರ್ ನನ್ನ ಬಳಿ ಇಲ್ಲ. ನಾನು ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಲು ನೋವಿನ ಕಾರಣದಿಂದ ಮೇಕೆದಾಟು ಹೋರಾಟಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *