Chennai Stories: ಶೀರ್ಷಿಕೇ ಸೂಚಿಸುವಂತೆ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇಂಗ್ಲೆಂಡ್ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಭಾರತದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮೂಲಕ ಅವರು ಹಿಂದಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ‘ಪುಷ್ಪ’ ಸಿನಿಮಾದ ಹಾಡಿನಲ್ಲಿ ಐಟಂ ಡಾನ್ಸ್ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ಈಗ ಅವರು ಇಂಗ್ಲಿಷ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆ ಚಿತ್ರಕ್ಕೆ ‘ಚೆನ್ನೈ ಸ್ಟೋರೀಸ್’ (Chennai Stories) ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಶೀರ್ಷಿಕೇ ಸೂಚಿಸುವಂತೆ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇಂಗ್ಲೆಂಡ್ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಸಿನಿಮಾದ ಕಥೆ ಬಗ್ಗೆಯೂ ಮಾಹಿತಿ ಕೇಳಿಬಂದಿದೆ.
ಈ ಸಿನಿಮಾದ ಕಥೆ ಏನು?
‘ಅರೇಂಜ್ಮೆಂಟ್ಸ್ ಆಫ್ ಲವ್’ ಕಾದಂಬರಿ ಆಧರಿಸಿ ‘ಚೆನ್ನೈ ಸ್ಟೋರೀಸ್’ ಸಿನಿಮಾ ತಯಾರಾಗಲಿದೆ. ಇಂಗ್ಲಿಷ್ ಮತ್ತು ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ತಾಯಿ ಸತ್ತ ಬಳಿಕ ವಿದೇಶದಿಂದ ಚೆನ್ನೈಗೆ ಬಂದು ತನ್ನ ತಂದೆಯನ್ನು ಹುಡುಕುವ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಆ ವ್ಯಕ್ತಿಗೆ ಸಹಾಯ ಮಾಡುವ ಡಿಟೆಕ್ಟೀವ್ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ವೈಯಕ್ತಿಕ ಜೀವನದ ಕಾರಣದಿಂದಲೂ ಸಮಂತಾ ಅವರು ಆಗಾಗ ಸುದ್ದಿ ಆಗುತ್ತಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ ಬಳಿಕ ಒಂಟಿಯಾಗಿ ಬದುಕುತ್ತಿದ್ದಾರೆ. ವಿಚ್ಛೇದನ ಪಡೆದ ಅವರು ಸಂಪೂರ್ಣವಾಗಿ ಸಿನಿಮಾ ಮತ್ತು ವೆಬ್ ಸಿರೀಸ್ ಕಡೆಗೆ ಗಮನ ಹರಿಸಿದ್ದಾರೆ. ಹಲವು ವರ್ಷ ಪ್ರೀತಿಸಿ ಮದುವೆಯಾದ ಅವರು ಡಿವೋರ್ಸ್ ಪಡೆಯುವಂತಾಗಿದ್ದು ಬೇಸರದ ಸಂಗತಿ. ಹಾಗಿದ್ದರೂ ಕೂಡ ಸಮಂತಾಗೆ ಮದುವೆ ಬಗ್ಗೆ ನಂಬಿಕೆ ಕಡಿಮೆ ಆಗಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಹಾಗಂತ ಅವರೀಗ ಮರು ಮದುವೆ ಆಗಲು ಸಿದ್ಧರಿಲ್ಲ. ತಮ್ಮ ಸ್ನೇಹಿತರೊಬ್ಬರ ವಿವಾಹಕ್ಕಾಗಿ ಹೆಣ್ಣು ಹುಡುಕುತ್ತಿದ್ದಾರೆ! ಮದುವೆ ಎಂಬ ಕಾನ್ಸೆಪ್ಟ್ ಬಗ್ಗೆ ಅವರಿಗೆ ಈಗಲೂ ನಂಬಿಕೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.