ದೆಹಲಿ : ದೆಹಲಿ – ಎನ್​ಸಿಆರ್​ನಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ. ಬೆಳಗಿನ ಜಾವ 5.36 ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ 4.0 ರಷ್ಟಿದ್ದರೂ, ಕಂಪನವು ಬಲವಾಗಿತ್ತು.

ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಪ್ರಬಲ ಭೂಕಂಪನದ ಅನುಭವವನ್ನು ಅನುಭವಿಸಿದ್ದಾರೆ. ಈ ಭೂಕಂಪದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ, ಮಂಚ, ಕಿಟಕಿಗಳು ಮತ್ತು ಮನೆಯಲ್ಲಿದ್ದ ಅನೇಕ ವಸ್ತುಗಳು ಅಲುಗಾಡಲು ಪ್ರಾರಂಭಿಸಿದವು.

ಜನರಲ್ಲಿ ಭಯದ ವಾತಾವರಣವಿತ್ತು. ತಕ್ಷಣ ಜನರು ತಮ್ಮ ಮನೆಗಳಿಂದ ಹೊರಬರಲು ಪ್ರಾರಂಭಿಸಿದರು. ಈ ಭೂಕಂಪದ ಕೇಂದ್ರ ದೆಹಲಿಯಲ್ಲಿತ್ತು. ಅದರ ಆಳ ಕೇವಲ 5 ಕಿ.ಮೀ. ಆದರೆ, ಇಲ್ಲಿಯವರೆಗೆ ಯಾವುದೇ ನಷ್ಟದ ಸುದ್ದಿ ಬಂದಿಲ್ಲ. ನಮಗೆ ರೈಲಿನಲ್ಲಿ ಚಲಿಸುತ್ತಿರುವಂತೆ ಭಾಸವಾಯಿತು ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮತ್ತು ಸಂಭವನೀಯ ಭೂಕಂಪಗಳ ಬಗ್ಗೆ ಎಚ್ಚರದಿಂದಿರುವಂತೆ ಕೋರಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *