ಬೆಳಗಾವಿ : ಅಪ್ಸರ್ ಪಾಷಾ ಎಂಬ ಉಗ್ರನನ್ನು ಹಿಂಡಲಗಾ ಜೈಲಿಗೆ ಶಿಪ್ಟ್ ಮಾಡಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ಜಯೇಶ್ ಪೂಜಾರಿ ಹಾಗೂ ಅಪ್ಸರ್ ಫಾಷಾ ನಾಗ್ಪುರದಲ್ಲಿರುವ ಸಚಿವ ಗಡ್ಕರಿ ಕಚೇರಿಗೆ ಫೋನ್ ಮಾಡುವ ಮೂಲಕ ಜೀವ ಬೆದರಿಕೆ ಹಾಕಿ, 100 ಕೋಟಿ ರೂ ಬೇಡಿಕೆಯಿಟ್ಟಿದ್ದರು. 2023 ಜನವರಿ 14 ರಂದು ಗಡ್ಕರಿ ಕಚೇರಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರದ ನಾಗ್ಪುರ ‌ಠಾಣೆ ಪೊಲೀಸರು ಹೊಗಿದ್ದರು.

ಇಷ್ಟು ದಿನ ನಾಗ್ಪುರ ಕೇಂದ್ರ ‌ಕಾರಾಗೃಹದಲ್ಲಿದ್ದ ಅಪ್ಸರ್ ಪಾಷಾನನ್ನು ಮತ್ತೆ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.‌ ನಿನ್ನೆ ರಾತ್ರಿ ನಾಗ್ಪುರದಿಂದ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಅಪ್ಸರ್ ಪಾಷಾ ‌ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.


ಬೆಂಗಳೂರಿನ‌ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪ್ಸರ್ ಪಾಷಾ, ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಉಗ್ರ ಸಂಘಟನೆ ಜೊತೆಗೆ ಕೂಡಾ ಇತನ ನಂಟು ಹೊಂದಿದ ಆರೋಪದಡಿ ಶಿಕ್ಷೆಗೊಳಗಾಗಿದ್ದಾನೆ.

Leave a Reply

Your email address will not be published. Required fields are marked *